Advertisement

ವಿಜಯ್ ರೀತಿ ನೂರು ಜನರ ಬಂದ್ರೂ ಮೇಕೆದಾಟು ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ: ಗಣಿಗ ರವಿಕುಮಾರ್

[ad_1]

Ganiga Ravikumar

ಮಂಡ್ಯ: ವಿಜಯ್ ರೀತಿ ತಮಿಳುನಾಡಿನಲ್ಲಿ (Tamilnadu) ನೂರು ಮಂದಿ ಸಿಎಂ ಆದರೂ ಸಹ ನಾವು ಮೇಕೆದಾಟು ಡ್ಯಾಂ (Mekedatu Project) ಕಟ್ಟೋದನ್ನು ತಡೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ (Ganiga Ravikumar) ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಮೇಕೆದಾಟು ಯೋಜನೆಯ ಡಿಪಿಆರ್‌ನ್ನು ಸಿದ್ಧಪಡಿಸಿದ್ದೇವೆ. ಅಲ್ಲದೇ ಸುಪ್ರೀಂಕೋರ್ಟ್ (Supreme Court) ಸಹ ಕಾವೇರಿ ಬೋರ್ಟ್‌ನಲ್ಲಿ ತೀರ್ಮಾನ ಮಾಡಿಕೊಳ್ಳಿ ಎಂದು ಹೇಳಿದೆ. ನಮ್ಮ ಪರವಾಗಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ನಾವು ಡಿಪಿಆರ್‌ನ್ನು ಸಿದ್ಧತೆ ಮಾಡಿಕೊಂಡಿದ್ದೇವೆ.ಇದೀಗ ಮೇಕೆದಾಟು ವಿಚಾರದಲ್ಲಿ ಕಾನೂನು ಹೋರಾಟ ಮಾಡುವುದಾಗಿ ವಿಜಯ್ ಹೇಳಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆ ವಿರುದ್ಧ ಕಾನೂನು ಹೋರಾಟಕ್ಕೆ ವಿಜಯ್‌ ಸೂಚನೆ

ತಮಿಳುನಾಡಿನವರಿಗೆ ಅವರ ಪಾಲಿನ ನೀರನ್ನು ನಾವು ಕೊಡ್ತಾ ಇದೀವಿ. ನಮ್ಮ ಜಾಗದಲ್ಲಿ ಡ್ಯಾಂ ಕಟ್ಟುವುದನ್ನು ತಡೆಯುವ ಹಕ್ಕು ಅವರಿಗಿಲ್ಲ. ಇನ್ನೂ ಬಿಜೆಪಿ ಯಾವಾಗಲೂ ರಾಜಕೀಯವಾಗಿ ಮಾತನಾಡುತ್ತಾರೆ ಅಷ್ಟೇ. ಗೋವಾದಲ್ಲಿ ಅವರದ್ದೇ ಸರ್ಕಾರ ಇದೆ, ಆದರೂ ಕಳಸ ಬಂಡೂರಿಗೆ ಅವಕಾಶ ಕೊಡಿಸಲು ಆಗುತ್ತಿಲ್ಲ. ಆಯಾ ಆಯಾ ರಾಜ್ಯಗಳಲ್ಲಿ ಅವರುಗಳು ರಾಜಕಾರಣ ಮಾಡ್ತಾರೆ ಅಷ್ಟೇ. ಯಾರು ಏನೇ ಮಾಡಲಿ ಮೇಕೆದಾಟು ಡ್ಯಾಂ ಕಟ್ಟುವುದನ್ನು ತಡೆಯೋಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *