Advertisement

ಬೆಲ್ಜಿಯಂನಲ್ಲಿ ಶಾಲಾ ಮಿನಿಬಸ್‌ಗೆ ರೈಲು ಡಿಕ್ಕಿ – ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

[ad_1]

Belgium Train Accident

ಬ್ರಸೆಲ್ಸ್: ಶಾಲಾ ಮಕ್ಕಳಿದ್ದ ಸ್ಕೂಲ್ ಮಿನಿ ಬಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ದುರ್ಘಟನೆ ಮಂಗಳವಾರ ಬೆಲ್ಜಿಯಂನ (Belgium) ಉತ್ತರ ಭಾಗದಲ್ಲಿ ನಡೆದಿದೆ.

ಬೆಲ್ಜಿಯಂ ದೇಶದ ಬುಗ್ಗೆನ್‌ಹೌಟ್ ಹಳ್ಳಿಯಲ್ಲಿ ರೈಲು ಹಳಿ ದಾಟುವ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ. ಸ್ಕೂಲ್ ಮಿನಿಬಸ್‌ನಲ್ಲಿ ಏಳು ಮಕ್ಕಳು, ಓರ್ವ ಮೇಲ್ವಿಚಾರಕಿ ಹಾಗೂ ಚಾಲಕ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಕ್ರೀದ್‌ ಕುರ್ಬಾನಿಗೆ ಮಾರಾಟವಾದ ಡೊನಾಲ್ಡ್ ಟ್ರಂಪ್ ಹೆಸರಿನ ಎಮ್ಮೆ – ಬೆಲೆ ಕೇಳಿದ್ರೆ ಶಾಕ್‌ ಆಗ್ತೀರ!

ಪ್ರಾಥಮಿಕ ವರದಿಗಳ ಪ್ರಕಾರ, ಇಬ್ಬರು ಮಕ್ಕಳು, ಬಸ್ ಚಾಲಕ ಮತ್ತು ಮೇಲ್ವಿಚಾರಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ಜಖಂಗೊಂಡಿದೆ. ಘಟನೆ ವಿಚಾರ ತಿಳಿಯುತ್ತಿದ್ದಂತೆ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಹಾರ್ಮುಜ್‌ನಲ್ಲಿ ಜಲಬಾಂಬ್‌ ಇಡುತ್ತಿದ್ದ ಬೋಟ್‌, ಇರಾನ್‌ ಕ್ಷಿಪಣಿ ಉಡಾವಣಾ ತಾಣಗಳ ಮೇಲೆ US ವಾಯುದಾಳಿ

ಬೆಳಗ್ಗೆ ಸುಮಾರು 8:08ರ ವೇಳೆಗೆ ಈ ಘಟನೆ ನಡೆದಿದೆ. ಮುಂದಿನ ನಿಲ್ದಾಣಕ್ಕೆ ತೆರಳುತ್ತಿದ್ದ ರೈಲು ಮಿನಿಬಸ್‌ಗೆ ಡಿಕ್ಕಿ ಹೊಡೆದಿದೆ. ರೈಲ್ವೆ ಕ್ರಾಸಿಂಗ್‌ನಲ್ಲಿ ಕೆಂಪು ಸಿಗ್ನಲ್ ಇದ್ದು, ಗೇಟ್ ಬ್ಯಾರಿಯರ್‌ಗಳು ಮುಚ್ಚಿದ್ದರೂ ಮಿನಿಬಸ್ ಹಳಿಯ ಮೇಲೆ ಚಲಿಸಿರುವುದರಿಂದ ಈ ಅಪಘಾತ ಸಂಭವಿಸಿದೆ. ಘಟನೆಯ ಬಳಿಕ ರೈಲು ಮಾರ್ಗದ ಬಳಿ ತುರ್ತು ಚಿಕಿತ್ಸೆ ಶಿಬಿರಗಳನ್ನು ಸ್ಥಾಪಿಸಿ ರಕ್ಷಣಾ ಕಾರ್ಯ ಮುಂದುವರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

[ad_2]

Source link publictv.in

Leave a Reply

Your email address will not be published. Required fields are marked *