Advertisement

ಗುಜರಾತ್‌ ಬಗ್ಗುಬಡಿದು ಫೈನಲ್‌ಗೆ RCB ‘ರಾಯಲ್‌’ ಎಂಟ್ರಿ – ಈ ಸಲನೂ ಕಪ್‌ ನಮ್ದೆ?

[ad_1]

rcb 4

– ಕಳೆದ 8 ವರ್ಷಗಳಲ್ಲಿ ಕ್ವಾಲಿಫೈಯರ್-1 ಗೆದ್ದೋರೇ ಚಾಂಪಿಯನ್‌!

ಧರ್ಮಶಾಲಾ: ನಾಯಕ ರಜತ್‌ ಪಾಟಿದಾರ್‌ ಅಬ್ಬರದ ಬ್ಯಾಟಿಂಗ್‌ ಹಾಗೂ ಜಾಕೋಬ್ ಡಫ್ಫಿ ಬೆಂಕಿ ಬೌಲಿಂಗ್‌ಗೆ ಗುಜರಾತ್‌ ಧೂಳೀಪಟವಾಯ್ತು. ಕ್ವಾಲಿಫೈಯರ್‌-1 ಪಂದ್ಯದಲ್ಲಿ 92 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಆರ್‌ಸಿಬಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಐಪಿಎಲ್‌ನಲ್ಲಿ ಸತತ ಎರಡನೇ ಟ್ರೋಫಿ ಗೆಲ್ಲುವ ಭರವಸೆಯನ್ನು ಅಭಿಮಾನಿಗಳಲ್ಲಿ ಆರ್‌ಸಿಬಿ ಜೀವಂತವಾಗಿರಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 254 ರನ್‌ಗಳ ಬೃಹತ್‌ ಮೊತ್ತವನ್ನು ಕಲೆಹಾಕಿತು. 255 ರನ್‌ಗಳ ಗುರಿ ಬೆನ್ನತ್ತಿದ ಜಿಟಿ ಬ್ಯಾಟಿಂಗ್‌ನಲ್ಲಿ ಮಕಾಡೆ ಮಲಗಿತು. 162 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

[ad_2]

Source link publictv.in

Leave a Reply

Your email address will not be published. Required fields are marked *