-ಹುಬ್ಬಳ್ಳಿ ಕಿಮ್ಸ್ ನಲ್ಲಿ ಬೆಡ್ ಕೊರತೆ ಹೇಳಿ ಚಿಕಿತ್ಸೆ ನೀಡದ ಹಿನ್ನೆಲೆ,ಬ್ರೈನ್ ಡೆಡ್ ಆದ ಯುವಕ ಇಂದು,ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ಮೃತ ಹುಬ್ಬಳ್ಳಿ ಕಿಮ್ಸ್ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ನಲ್ಲಿ ಬೆಡ್ ಕೊರತೆ ಹೇಳಿ ಚಿಕಿತ್ಸೆ ನೀಡದ ಹಿನ್ನೆಲೆ,ಬ್ರೈನ್ ಡೆಡ್ ಆದ ಯುವಕ ಇಂದು,ಚಿಕಿತ್ಸೆ ಫಲಕಾರಿಯಾಗದೇ ಮುಂಜಾನೆ ಮೃತಪಟ್ಟಿದ್ದು,ಹುಬ್ಬಳ್ಳಿ ಕಿಮ್ಸ್ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಮೊರಬ ನಿವಾಸಿ ಪ್ರಕಾಶ್ ಮರಿಗೌಡ್ರು (25) ಸಾವನ್ನಪ್ಪಿರುವ ಯುವಕ..ಜೆಸಿಪಿ ಚಾಲಕನಾಗಿದ್ದ ಪ್ರಕಾಶ ಮರಿಗೌಡ್ರ ಮನೆಗೆ ಬೈಕ್ ನಲ್ಲಿ ಹೋಗುವಾಗ ಅಪಘಾತವಾಗಿತ್ತು.ಸೋಮಾಪುರ – ನವಲೂರು ರಸ್ತೆಯಲ್ಲಿ ಮಾರ್ಚ್ 13 ರ ರಾತ್ರಿ ಅಪಘಾತ ತಕ್ಷಣ ಪ್ರಕಾಶ್ ನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ತರಲಾಗಿತ್ತು.ಈ ವೇಳೆ ಬೆಡ್ ಗಳಿಲ್ಲ ಎಂದು ಹೇಳಿದ್ದ ಕಿಮ್ಸ್ ಸಿಬ್ಬಂದಿ, ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ಒಯ್ದಿದ್ದ ಸಂಬಂಧಿಕರು,ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಆದ್ರೆ ಬ್ರೈನ್ ಡೆಡ್ ಹಿನ್ನೆಲೆ ನಿನ್ನೆ ಸಂಜೆ ಮತ್ತೆಕಿಮ್ಸ್ ಗೆ ಕಳುಹಿಸಿಕೊಟ್ಟ ಎಸ್.ಡಿ.ಎಂ. ಸಿಬ್ಬಂದಿಮೊದಲೇ ಕಿಮ್ಸ್ ನಲ್ಲಿ ದಾಖಲಿಸಕೊಂಡಿದ್ದರೆ ಬದುಕುತ್ತಿದ್ದ ಎಂದು ತಮ್ಮ ನೋವು ವ್ಯಕ್ತವಾಗಿದೆ.
ಕಿಮ್ಸ್ ನಲ್ಲಿ ಬೆಡ್ ಕೊರತೆ ಚಿಕಿತ್ಸೆ ನೀಡದ ಹಿನ್ನೆಲೆ,ಬ್ರೈನ್ ಡೆಡ್ ಆದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವು












Leave a Reply