ಕೆಮಿಕಲ್ ರಿಯಾಕ್ಷನ್ ನಾಲ್ವರು ಕಾರ್ಮಿಕರು ಅಸ್ವಸ್ಥ

ಹುಬ್ಬಳ್ಳಿ: ಕೆಮಿಕಲ್ ರಿಯಾಕ್ಷನ್ ಆಗಿ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಹುಬ್ಬಳ್ಳಿ ದೇಶಪಾಂಡೆ ನಗರದ ಖಾಸಗಿ ಬಿಲ್ಡಿಂಗ್ ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಜಾಫರ್, ಅಹ್ಮದ್, ಜಬಿ , ಹೈದರ್ ಎಂಬವರಿಗೆ ಕೆಮಿಕಲ್ ರಿಯಾಕ್ಷನ್ ಆಗಿದೆ. ಬಿಲ್ಡಿಂಗ್ ವೊಂದಕ್ಕೆ ಫ್ಲೈ ವುಡ್ ವರ್ಕ್ ನಡೆದಿತ್ತು ಹೀಗಾಗಿ ಸಾಕಷ್ಟು ಕೆಮಿಕಲ್ ಬಳಕೆ ಮಾಡಲಾಗಿತ್ತು.ಕೆಲಸ ದಿಂದ ಸುಸ್ತಾಗಿ ತಡ ರಾತ್ರಿ ಸಂಪೂರ್ಣ ಬಾಗಿಲು, ಕಿಟಕಿ ಬಂದ್ ಮಾಡಿ ಕಾರ್ಮಿಕರು ಮಲಗಿದ್ದರು. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗಿ ಪ್ರಜ್ಞೆ ಕಳೆದುಕೊಂಡು,ಬಾಯಲ್ಲಿ ನೊರೆ, ರಾತ್ರಿ ಊಟ ವಾಂತಿ ರೂಪದಲ್ಲಿ ಹೊರ ಬಂದಿದ್ದ ಆಹಾರ ಬಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ಕೂಡಲೇ ಅಸ್ವಸ್ಥರನ್ನ ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದೆ.ಆಸ್ಪತ್ರೆಯಲ್ಲಿ ಪ್ರಜ್ಞಾ ಹೀನರಾದ ಕಾರ್ಮಿಕರಿಗೆ ಚಿಕಿತ್ಸೆ ಮುಂದುವರಿದೆ.

Leave a Reply

Your email address will not be published. Required fields are marked *