Advertisement

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ; ಇಂದಿನ ಕನಿಷ್ಟ, ಗರಿಷ್ಠ ದರ ಎಷ್ಟಿದೆ ..? » Dvgsuddi Kannada | online news portal

[ad_1]

ದಾವಣಗೆರೆ: ಜಿಲ್ಲೆಯ ರೈತರ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ಸತತ ಕುಸಿತ ಬಳಿಕ ಭರ್ಜರಿ ಸ ಚೇತರಿಕೆ ಕಂಡಿದೆ. ಕಳೆದ ವಾರ 54 ಸಾವಿರ ರೂ. ಇದ್ದ ಉತ್ತಮ ಅಡಿಕೆ ದರ, ಇಂದು (ಮಾ.30) 55,699 ರೂ. ಆಗಿದೆ.

ಮಾ.30ರ ಚನ್ನಗಿರಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)

  • ಗರಿಷ್ಠ ಬೆಲೆ 55,699 ರೂ.
  • ಕನಿಷ್ಠ ಬೆಲೆ 45,399ರೂ.
  • ಸರಾಸರಿ ಬೆಲೆ 53,425 ರೂ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ‌ ಮಾ.30ರಂದು ಉತ್ತಮ ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 55,699 ರೂ. ಇದ್ದು, ಕನಿಷ್ಠ ಬೆಲೆ 45,399 ರೂ., ಸರಾಸರಿ ಬೆಲೆ 53,425 ರೂ.‌ಇದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ರಾಶಿ ಅಡಿಕೆಯನ್ನು ರೈತರು, ವ್ಯಾಪಾರಿಗಳು ಸಂಗ್ರಹ ಮಾಡಿಕೊಂಡಿದ್ದು, ದರ ಏರಿಕೆಗೆ ಕಾಯುತ್ತಿದ್ದಾರೆ.

ನಾಲ್ಕು ವರ್ಷಗಳ ಗರಿಷ್ಠ ದರ ಪಟ್ಟಿ

  • 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ
  • 2024 ಮೇ ತಿಂಗಳಲ್ಲಿ ಗರಿಷ್ಠ ದರ 55 ಸಾವಿರ
  • 2025 ಅಕ್ಟೋಬರ್ ‌ನಲ್ಲಿ ಗರಿಷ್ಠ ದರ 68,349 ರೂ.
  • 2026 ಜನವರಿ ಗರಿಷ್ಠ ದರ‌ ರೂ.59,299

2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಮೇ ತಿಂಗಳಲ್ಲಿ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು ಕೊನೆಯಲ್ಲಿ 56,599 ರೂ. ಗೆ ಇಳಿಕೆಯಾಗಿತ್ತು. ಜುಲೈ ಮೊದಲ ವಾರ ಚೇತರಿಕೆ ಕಂಡು 58,099 ರೂ. ಆಗಿತ್ತು. ಆಗಸ್ಟ್ ಆರಂಭದಲ್ಲಿ ಸತತ ಏರಿಕೆ ಕಂಡು ಕ್ವಿಂಟಲ್ ಗೆ 60,500ರೂ. ತಲುಪಿತ್ತು. ಸೆಪ್ಟೆಂಬರ್ ನಲ್ಲಿ 62,889 ರೂ. ಇತ್ತು.

ಅಕ್ಟೋಬರ್ ತಿಂಗಳಲ್ಲಿ ಈ ವರ್ಷದಲ್ಲಿಯೇ ಗರಿಷ್ಠ ಬೆಲೆ 68, 349 ರೂ. ಇತ್ತು. ನವೆಂಬರ್ 60 ಸಾವಿರ ಗಡಿ ದಾಟಿತ್ತು. ಡಿಸೆಂಬರ್ 58,35 ರೂ. ಗೆ ಕುಸಿದಿತ್ತು. 2026 ವರ್ಷದ ಮೊದಲ ತಿಂಗಳು ಜವರಿ ಕೊನೆಯಲ್ಲಿ 56,899 ರೂ. ಇತ್ತು. ಫೆಬ್ರವರಿ 56,119,ರೂ. ಇತ್ತು. ಈಗ ಮಾರ್ಚ್ ಕೊನೆಯಲ್ಲಿ 55,699 ರೂ. ಇದೆ.

[ad_2]

Source link

Leave a Reply

Your email address will not be published. Required fields are marked *