Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕರಾಗಿ ಉಳಿದಿಲ್ಲ; ಸಿಎಂ ಶಾಮನೂರು ಕುಟುಂಬಕ್ಕೆ ಮಾರಾಟ- ಶೀಘ್ರ ಬಿಜೆಪಿ ಸೇರ್ಪಡೆ; ವಿನಯ್‌ಕುಮಾರ್‌ » Dvgsuddi Kannada | online news portal

[ad_1]

ದಾವಣಗೆರೆ: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪರವಾಗಿ ಪ್ರಚಾರ ಮಾಡುತ್ತ ಮಾನಸಿಕವಾಗಿ ಬಿಜೆಪಿ ಜೊತೆಗಿದ್ದೇನೆ. ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದೇನೆ’ ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಬಿ.ವಿನಯ್‌ಕುಮಾರ್‌ ಘೋಷಣೆ ಮಾಡಿದರು.

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ; ಇಂದಿನ ಕನಿಷ್ಟ, ಗರಿಷ್ಠ ದರ ಎಷ್ಟಿದೆ ..?

ಸಿದ್ದರಾಮಯ್ಯ ಶಾಮನೂರು ಕುಟುಂಬಕ್ಕೆ ಮಾರಾಟ

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ನಾಯಕರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಳಿದಿಲ್ಲ. ಅವರು ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಾಮನೂರು ಕುಟುಂಬಕ್ಕೆ ಮಾರಾಟವಾಗಿದ್ದಾರೆ ಎಂದು ಆರೋಪಿಸಿದರು.

ಬಡವರ ಮಕ್ಕಳಿಗೆ ಕಾಂಗ್ರೆಸ್‌ನಲ್ಲಿ ಉಳಿಗಾಲವಿಲ್ಲ. ಕುಟುಂಬ ರಾಜಕಾರಣವನ್ನು ಕಾಂಗ್ರೆಸ್‌ ಪೋಷಣೆ ಮಾಡುತ್ತಿದೆ. ಜಾತ್ಯತೀತ ತತ್ವ ಕೇವಲ ಮುಖವಾಡ ಮಾತ್ರ

-ಜಿ.ಬಿ.ವಿನಯ್‌ಕುಮಾರ್‌

ಒಂದೇ ಕುಟುಂಬಕ್ಕೆ ಎಷ್ಟು ಅಧಿಕಾರ ಬೇಕು?

ಸಂಸದೆ ಇರುವ ಕುಟುಂಬಕ್ಕೆ ಇನ್ನೂ ಎಷ್ಟು ಅಧಿಕಾರ ಬೇಕು? ಈ ಕುಟುಂಬಕ್ಕೆ ರಾಜಕಾರಣ ಬೇಕಿರುವುದು ಜನಸೇವೆಗಲ್ಲ, ಉದ್ಯಮದ ಪೋಷಣೆಗೆ ರಾಜಕಾರಣದಲ್ಲಿ ಇದ್ದಾರೆ‌ ಎಂದು ಆಕ್ರೋಶ ಹೊರಹಾಕಿದರು.

ಯಾವುದೇ ಸಿದ್ಧಾಂತ, ಬದ್ಧತೆ ಇಲ್ಲ

ಸಿದ್ದರಾಮ್ಯಯ 2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದರು. ಅವರ ಆಡಳಿತ ಕಂಡು ನನ್ನನ್ನೂ ಸೇರಿದಂತೆ ಅನೇಕ ಯುವಕರು ರಾಜಕಾರಣಕ್ಕೆ ಬಂದಿದ್ದೇವೆ. ಆದರೆ ಅವರಿಗೆ ಯಾವುದೇ ಸಿದ್ಧಾಂತ, ಬದ್ಧತೆ ಇಲ್ಲ ಎಂದು ಕಿಡಿಕಾರಿದರು.

ಬಡ ಯುವಕರ ಹೆಗಲ ಮೇಲೆ ಕೈಹಾಕಿ ಮುಗಿಸ್ತಾರೆ

‘ದೇವರಾಜ ಅರಸು ದಾಖಲೆ ಮುರಿದಿರುವುದಾಗಿ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಅರಸು ಅವರು ಸಣ್ಣ ಸಮುದಾಯದ ನಾಯಕರನ್ನು ರಾಜಕಾರಣಕ್ಕೆ ಕರೆತಂದರು. ಪರಿಸ್ಥಿತಿಯನ್ನು ಎದುರಿಸಿ ಅವರಿಗೆ ರಾಜಕೀಯ ನೆಲೆ ಕಲ್ಪಿಸಿದರು. ಸಿದ್ದರಾಮಯ್ಯ ಇದಕ್ಕೆ ತದ್ವಿರುದ್ಧವಾಗಿದ್ದಾರೆ. ರಾಜಕಾರಣ ಪ್ರವೇಶಿಸಿದ ಬಡ ಯುವಕರ ಹೆಗಲ ಮೇಲೆ ಕೈಹಾಕಿ ಮುಗಿಸಿಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ವರಿಷ್ಠರು ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಅವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಏ.3ರಿಂದ ಕ್ಷೇತ್ರದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದೇನೆ. ಬಿಜೆಪಿ ಗೆದ್ದರೆ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ದೊಡ್ಡ ಸಂದೇಶ ರವಾನೆ ಆಗಲಿದೆ’ ಎಂದರು.

ಮಾಜಿ ಸಚಿವ ಶಿವನಗೌಡ ನಾಯಕ, ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ಶರತ್, ಹೇಮಂತ್ ಇದ್ದರು.

[ad_2]

Source link

Leave a Reply

Your email address will not be published. Required fields are marked *