Advertisement

ವಾಣಿಜ್ಯ ಸಿಲಿಂಡರ್ ಬೆಲೆ 195.50 ರೂ. ಹೆಚ್ಚಳ; ಗೃಹ ಬಳಕೆ ಸಿಲಿಂಡರ್ ‌ನಲ್ಲಿ ಯಾವುದೇ‌ ಏರಿಕೆ ಇಲ್ಲ.‌..! » Dvgsuddi Kannada | online news portal

[ad_1]

ನವದೆಹಲಿ: ಇಸ್ರೇಲ್-ಇರಾನ್- ಅಮೆರಿಕ ಯುದ್ಧ ಪರಿಣಾಮ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಗಳಲ್ಲಿ ಬೆಲೆ ಏರಿಕೆ ಆಗಿದೆ. ಇದರ ನೇರ ಪರಿಣಾಮ ಎಲ್ ಪಿಜಿ ಸಿಲಿಂಡರ್ ಮೇಲೂ ತಟ್ಟಿದೆ. ಇಂದಿನಿಂದ ( ಏ. 1) ಜಾರಿಯಾಗುವಂತೆ ವಾಣಿಜ್ಯ ಸಿಲಿಂಡರ್ (19 ಕೆ.ಜಿ‌) ಬೆಲೆ 195.50 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ವಾಣಿಜ್ಯ ಎಲ್ ಪಿಜಿಯ ಹೊಸ ದರ 2,078.50 ರೂಪಾಯಿಗೆ ತಲುಪಿದೆ.ಮಾರ್ಚ್ 1ರಂದು 114.5 ರೂಪಾಯಿ ಹೆಚ್ಚಳವಾಗಿತ್ತು.

ಗೃಹಬಳಕೆ ಸಿಲಿಂಡರ್ ದರ‌ (14 ಕೆಜಿ) ಯಾವುದೇ ಏರಿಕೆ ಕಂಡಿಲ್ಲ. ಗೃಹ ಬಳಕೆ ದರ ಮಾರ್ಚ್ 7ಕ್ಕೆ 60 ರೂಪಾಯಿ ಹೆಚ್ಚಳ ಮಾಡಲಾಗಿತ್ತು.‌ ಈಗ ಗೃಹ‌ ಬಳಕೆ ಗ್ಯಾಸ್ ಬೆಲೆ 913 ರೂ.ಇದೆ.

ಅಂತರಾಷ್ಟ್ರೀಯ ಮಾರುಕಟ್ಟೆ ಆಧಾರಿಸಿ ದೇಶದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ, ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ಎಲ್ ಪಿಜಿ ಬೆಲೆಯನ್ನು ಪ್ರತೀ ತಿಂಗಳ ಒಂದನೇ ತಾರೀಕಿನಂದು ಪರಿಷ್ಕರಿಸುತ್ತವೆ.

ಯುದ್ಧದ ಪರಿಣಾಮ ಅಂತರಾಷ್ಟ್ರೀಯ ತೈಲ ಬೆಲೆಗಳು 50% ಹೆಚ್ಚಳ ಆಗಿವೆ. ಇಂಧನದ ಹಾಗೂ ತೈಲಗಳ ಸಾಗಾಣಿಕೆ ಮೇಲೆ ತೀವ್ರ ಹೊಡೆತ ಬಿದ್ದಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.

 

[ad_2]

Source link

Leave a Reply

Your email address will not be published. Required fields are marked *