ರಾಜಾರೋಷವಾಗಿ ಹಾಡಹಗಲೇ ಅಕ್ರಮ ಇಸ್ಪೀಟು ದಂಧೆ

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಂದರ್ ಬಾಹರ್…
ರಾಜಾರೋಷವಾಗಿ ಹಾಡಹಗಲೇ ಅಕ್ರಮ ಇಸ್ಪೀಟು ದಂಧೆ..
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ಜೋರಾಗಿ ನಡೆಯುತ್ತಿದೆ. ಒಂದು ಆಟಕ್ಕೆ ಐದರಿಂದ ಆರು ಲಕ್ಷ ಹಣ ಜೂಜು ಕಟ್ಟಲಾಗುತ್ತಿದ್ದು,ನಿತ್ಯ ಲಕ್ಷಾಂತರ ರೂಪಾಯಿ ಹಣ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದು,ಕಾನೂನು ಬಾಹಿರ ಚಟುವಟಿಕೆಗಳ ತಾಣವಾಯಿತಾ ಹುಬ್ಬಳ್ಳಿ?. ಎನ್ನುವ ಅನುಮಾನ ಮೂಡಿದೆ.

ರಾಜಾರೋಷವಾಗಿ ಹಾಡಹಗಲೇ ಅಕ್ರಮ ಇಸ್ಪೀಟು ಆಟ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮಾತ್ರ ಕಣ್ಣ್ಮುಚ್ಚಿ ಕುಳಿತಿರುವ ಆರೋಪ ಕೇಳಿ ಬಂದಿದೆ.ಹುಬ್ಬಳ್ಳಿ ನಗರಕ್ಕೆ ಹೊಂದಿಕೊಂಡಿರುವ ಹಾಗೂ ಕಸಬಾ ಪೇಟೆ, ಹಳೇ ಹುಬ್ಬಳ್ಳಿ, ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಫಾರ್ಮ್ ಹೌಸ್ ಗಳಲ್ಲಿ ಎಗ್ಗಿಲ್ಲದೆ ಈ ಇಸ್ಪೀಟು ದಂಧೆ ನಡೆಯುತ್ತಿದೆ.
ಕೆಲ ರೌಡಿ ಶಿಟರ್ ಗಳು, ಅವರ ಚೇಲಾಗಳಿಂದ ಯುವಕರನ್ನು ದಾರಿ ತಪ್ಪಿಸುವ ಕೃತ್ಯ ನಡೆಯುತ್ತಿರುವ ಆರೋಪ ಕೇಳಿ ಬಂದಿದೆ…















Leave a Reply