Advertisement

ದಾವಣಗೆರೆ: ಜಮೀನು ಹದ್ದುಬಸ್ತಿಗೆ 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ » Dvgsuddi Kannada | online news portal

[ad_1]

ದಾವಣಗೆರೆ: ಜಮೀನು ಹದ್ದುಬಸ್ತಿಗೆ 50 ಸಾವಿರ ಲಂಚ ಪಡೆಯುವಾಗ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ, ಸಚಿವರು, ಸಂಸದರು ಸೌಜನ್ಯಕ್ಕೂ ನನ್ನ ಪ್ರಚಾರಕ್ಕೆ ಕರೆದಿಲ್ಲ; ಅಬ್ದುಲ್ ಜಬ್ಬಾರ್‌

ದಾವಣಗೆರೆ ಹೊರ ವಲಯದ ನಾಗನೂರು ಗ್ರಾಮದ ಜಮೀನು ಹದ್ದುಬಸ್ತಿಗೆ ವೈದ್ಯರೊಬ್ಬರಿಂದ ‍50,000 ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಚಂದ್ರಪ್ಪ ಲೋಕಾಯುಕ್ತ‌ ಪೊಲೀಸರ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.

ಹಿಂದಿಗೆ ಗ್ರೇಡಿಂಗ್ ; ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ; ಕರವೇ ಕಿಡಿ

ಲೋಕಾಯುಕ್ತ ಪೊಲೀಸರು ಲಂಚದ ರೂಪದ ಹಣವನ್ನು ಜಪ್ತಿ ಮಾಡಿದ್ದಾರೆ. ವೈದ್ಯ ಡಾ.ಉಮೇಶ್ ಹಿರೇಮಠ ಅವರು ನಾಗನೂರು ಗ್ರಾಮದ ಸರ್ವೆ ನಂಬರ್ 158ರಲ್ಲಿ ಜಮೀನು ಹೊಂದಿದ್ದು, ಇದಕ್ಕೆ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಧೂಡಾ) ಏಕನಿವೇಶನಕ್ಕೆ ಅನುಮೋದನೆ ಪಡೆದಿದ್ದರು. ಆದರೆ, ಪಕ್ಕದ ಜಮೀನಿನವರು ಹದ್ದುಬಸ್ತ್ ಮಾಡಿಸದೆ ಏಕನಿವೇಶನ ಮಾಡಿಸಲು ತಕರಾರು ವ್ಯಕ್ತಪಡಿಸಿದ್ದರು. ಹೀಗಾಗಿ, ಉಮೇಶ್ ಹದ್ದುಬಸ್ತಿಗೆ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಜಮೀನು ಹದ್ದುಬಸ್ತಿಗೆ ಮಾಡಿಕೊಡಲು ಕಂದಾಯ ನಿರೀಕ್ಷಕ ಚಂದ್ರಪ್ಪ ಮಾರ್ಚ್ 18ರಂದು ವೈದ್ಯರ ಖಾಸಗಿ ಆಸ್ಪತ್ರೆಗೆ ತೆರಳಿ ಧೂಡಾ ಹದ್ದುಬಸ್ತ್ ವರದಿ ನೀಡಲು
50,000 .ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡಾ.ಉಮೇಶ್ ಈ ಬಗ್ಗೆ ದೂರು ಸಲ್ಲಿಸಿದ್ದರು. ದಾವಣಗೆರೆ ತಾಲ್ಲೂಕುಕಚೇರಿಯಲ್ಲಿ ಡಿವೈಎಸ್‌ಪಿ ಕಲಾವತಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

[ad_2]

Source link

Leave a Reply

Your email address will not be published. Required fields are marked *