Advertisement

ದಾವಣಗೆರೆ ದಕ್ಷಿಣ ಕಾಂಗ್ರೆಸ್‍ನ ಭದ್ರಕೋಟೆ; ಬೈ ಎಲೆಕ್ಷನ್ ಕಾಂಗ್ರೆಸ್ ಗೆಲ್ಲಲಿದೆ; ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಹಜ- ಸಚಿವ ಝಮೀರ್ » Dvgsuddi Kannada | online news portal

[ad_1]

ದಾವಣಗೆರೆ: ದಾವಣಗೆರೆ ದಕ್ಷಿಣ ಟಿಕೆಟ್ ಹಂಚಿಕೆ ಗೊಂದಲ ಕಾರಣದಿಂದ ಪ್ರಚಾರ ಕಾರ್ಯದಿಂದ ದೂರ ಉಳಿದಿದ್ದ ಸಚಿವ ಬಿ.ಝಡ್ ಝಮೀರ್ ಅಹ್ಮದ್ ಖಾನ್ ಇವತ್ತು (ಏ.05) ದಿಢೀರ್ ಪ್ರತ್ಯಕ್ಷವಾಗಿದ್ದರು. ಈ ಮೂಲಕ ಪ್ರಚಾರದ ‌ಕೊನೆ ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯ ವೋಟ್ ಸೆಳೆಯುವ ಪ್ರಯತ್ನ ಮಾಡಿದರು.

ದಾವಣಗೆರೆ: ಜಮೀನು ಹದ್ದುಬಸ್ತಿಗೆ 50 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಲ್ಲಿಕಾರ್ಜುನ್ ನಾನು ಆತ್ಮೀಯ ಸ್ನೇಹಿತರು

ಸಚಿವ ಮಲ್ಲಿಕಾರ್ಜುನ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲ್ಲಿಕಾರ್ಜುನ್ ಮತ್ತು ನಾವು ಆತ್ಮೀಯ ಸ್ನೇಹಿತರು. ನಾವು ಏಕವಚನದಲ್ಲಿ ಮಾತನಾಡಿಸಿಕೊಳ್ಳುತ್ತೇವೆ. ನನ್ನ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಡುವೆ ಯಾವುದೇ ಮನಸ್ತಾಪ, ಮುನಿಸು ಇಲ್ಲ. ಇದೆಲ್ಲಾ ಮಾಧ್ಯಮ ಸೃಷ್ಠಿ.ಅಸಮಾಧಾನಿತ ಎಲ್ಲಾ ಕಾಂಗ್ರೆಸ್ ಸದಸ್ಯರು ಒಂದೇ ಕುಟುಂಬವಿದ್ದಂತೆ. ಕುಟುಂಬದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಎಂದು ಸ್ಪಷ್ಟನೆ ನೀಡಿದರು.

ದಾವಣಗೆರೆ: ಕಾಂಗ್ರೆಸ್ ಅಭ್ಯರ್ಥಿ, ಸಚಿವರು, ಸಂಸದರು ಸೌಜನ್ಯಕ್ಕೂ ನನ್ನ ಪ್ರಚಾರಕ್ಕೆ ಕರೆದಿಲ್ಲ; ಅಬ್ದುಲ್ ಜಬ್ಬಾರ್‌

ದಾವಣಗೆರೆ ದಕ್ಷಿಣ ಕಾಂಗ್ರೆಸ್‍ನ ಭದ್ರಕೋಟೆ

ಸಿದ್ದರಾಮಯ್ಯ ಅವರ ಸೂಚನೆಯಂತೆ ಇಂದು ದಾವಣಗೆರೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಪರ ಪ್ರಚಾರಕ್ಕೆ ಬಂದ್ದಿದ್ದೇನೆ. ದಾವಣಗೆರೆ ದಕ್ಷಿಣ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದು, ಯಾರು ಬಂದರೂ, ಬರದಿದ್ದರೂ ಕಾಂಗ್ರೆಸ್ ಗೆಲ್ಲಲಿದೆ. ಸಮುದಾಯ ಮತ್ತು ಪಕ್ಷದಲ್ಲಿ ಕೆಲವರು ಅಸಮಾಧಾನಗೊಂಡಿದ್ದು ಅವರನ್ನು ಮಾತನಾಡಿಸಿ ಸಮಾಧಾನ ಪಡಿಸಿ ಕೆಲಸ ಮಾಡುವಂತೆ ತಿಳಿಸುತ್ತೇನೆ ಎಂದು ಹೇಳಿದರು.

ಅನುಕಂಪದ ಹಿನ್ನಲೆಯಲ್ಲಿ ಪಕ್ಷದ ಟಿಕೆಟ್

ಪಕ್ಷದ ಸಂಪ್ರದಾಯದಂತೆ ಅನುಕಂಪದ ಹಿನ್ನಲೆಯಲ್ಲಿ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಕುಟುಂಬದ ಸದಸ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಖಾಸಗಿ ಸಮಾರಂಭಕ್ಕೆಂದು ನಗರಕ್ಕೆ ಬಂದಾಗ ಆಹಿಂದ ಸಮಾಜದವರು ಮುಖ್ಯವಾಗಿ ಮುಸ್ಲಿಂ ಸಮಾಜದ ಮುಖಂಡರು ನನ್ನನ್ನು ದಾವಣಗೆರೆ ದಕ್ಷಿಣದ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಿಸುವಂತೆ ಕೇಳಿದ್ದರು. ಈ ಹಿನ್ನಲೆಯಲ್ಲಿ ನಾವು ಹೈಕಮಾಂಡಗೆ ಟಿಕೆಟ್‍ಗಾಗಿ ಬೇಡಿಕೆ ಇಟ್ಟಿದ್ದವು. ಅದರೆ, ಟಿಕೆಟ್ ಕೊಡುವುದು ಹೈಕಮಾಂಡ್ ನಿರ್ಧಾರ.

224 ಕ್ಷೇತ್ರಗಳು ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ್ ಗಾಂಧಿ, ರಾಹುಲ್ ಗಾಂಧಿ ಅವರ ಕ್ಷೇತ್ರಗಳಾಗಿದ್ದು ಅವರು ಯಾರಿಗೆ ಬೇಕಾದರೂ ಟಿಕೆಟ್ ಕೊಡಬಹುದು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದು 3 ಸಾವಿರ ಮತ ಪಡೆದಿದ್ದರು.

ಕಾಂಗ್ರೆಸ್ ಸದಸ್ಯರು ಒಂದೇ ಕುಟುಂಬ

ಈ ಬಾರಿ 11 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದು ಅವರನ್ನು ಮನವೊಲಿಸುವ ಕೆಲಸ ಮಾಡುತ್ತೇವೆ. ವಿಧಾನಪರಿಷತ್ ಸದಸ್ಯ ಜಬ್ಬಾರ್ ಸಾಬ್ ಸೇರಿದಂತೆ ಅಸಮಾಧಾನಿತ ಎಲ್ಲಾ ಕಾಂಗ್ರೆಸ್ ಸದಸ್ಯರು ಒಂದೇ ಕುಟುಂಬವಿದ್ದಂತೆ. ಕುಟುಂಬದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಅಸಮಾಧಾನಿತರೊಂದಿಗೆ ಮಾತನಾಡಿ ಪ್ರಚಾರಕ್ಕೆ ಕರೆಯುತ್ತೇನೆ ಎಂದು ತಿಳಿಸಿದರು.

ಮಾತನಾಡುವ ಬರದಲ್ಲಿ ನಾನು ಆ ರೀತಿ ಮಾತನಾಡಿದೆ

ಸಚಿವ ಮಲ್ಲಿಕಾರ್ಜುನ್ ಮಾತನಾಡಿ, ಝಮೀರ್ ಆತ್ಮೀಯ ಸ್ನೇಹಿತ. ನಾವು ಆತ್ಮೀಯವಾಗಿ ಬಾರೋ ..ಹೋಗೋ ಅಂತಾ ಏಕವಚನದಲ್ಲಿಯೇ ಮಾತನಾಡಿಕೊಳ್ಳುತ್ತೇವೆ. ಮಾತನಾಡುವ ಬರದಲ್ಲಿ ನಾನು ಅಂದು ಆ ರೀತಿ ಮಾತನಾಡಿರುವುದು. ಅದನ್ನು ಬೆಳಸಿಕೊಂಡು ಹೋಗುವ ಅಗತ್ಯವಿಲ್ಲ. ನಮ್ಮ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದರು.

ರಾಜ್ಯ ಚುನಾವಣಾ ಉಸ್ತುವಾರಿ ಅಭಿಷೇಕ ದತ್ತ, ಸಚಿವ ಎಂ.ಸಿ. ಸುಧಾಕರ, ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಇತರರು ಇದ್ದರು.

[ad_2]

Source link

Leave a Reply

Your email address will not be published. Required fields are marked *