Advertisement

ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಭೇಟಿ

[ad_1]

ಸುಬ್ರಹ್ಮಣ್ಯ / ಬೆಳ್ತಂಗಡಿ: ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೋಮವಾರ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಸುರ್ಯ ಸದಾಶಿವ ದೇವಸ್ಥಾನಕ್ಕೆ ಭೇಟಿ ನೀಡಿದರು.

ಕುಕ್ಕೆ ಸುಬ್ರಹ್ಮಣ ಕ್ಷೇತ್ರಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ದಂಪತಿ ಮತ್ತು ಕುಟುಂಬದವರನ್ನು ದೇಗುಲದ ಅಧಿಕಾರಿಗಳು ಬರಮಾಡಿಕೊಂಡರು. ದೇವರ ದರ್ಶನ ಪಡೆದು ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡರು.ಅಲ್ಲಿಂದ ಕ್ಷೇತ್ರದ ಆರಾಧ್ಯ ದೈವ ಹೊಸಳಿಗಮ್ಮನ ಗುಡಿಯಲ್ಲಿ ದೈವದ ದರ್ಶನ ಪಡೆದರು.
ನಂತರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಅವರು, ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಳಿಕ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಉಜಿರೆ ಸಮೀಪದ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಅವರು, ವಿಶೇಷ ಪೂಜೆ ಸಲ್ಲಿಸಿದರು. ಅವರನ್ನು ದೇವಸ್ಥಾನದ ಮೊಕ್ತೇಸರ ಡಾ| ಸತೀಶ್ಚಂದ್ರ ಸುರ್ಯಗುತ್ತು ಸ್ವಾಗತಿಸಿದರು.



[ad_2]

Source link

Leave a Reply

Your email address will not be published. Required fields are marked *