Advertisement

ಪಿಯುಸಿ ಫಲಿತಾಂಶ; ಶೇ.86.48 ರಷ್ಟು ತೇರ್ಗಡೆ; ವಾಣಿಜ್ಯ ವಿಭಾಗದಲ್ಲಿ ಅದಿತಿ, ವಿದಿಶಾ 600ಕ್ಕೆ 600 ಅಂಕ » Dvgsuddi Kannada | online news portal

[ad_1]

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಶೇ.86.48 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಅದಿತಿ ಬಾಪು, ದಿಶಾ – 600ಕ್ಕೆ 600 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

ಪಿಯುಸಿ ಟಾಪರ್ ವಿವರ

ವಾಣಿಜ್ಯ ವಿಭಾಗ

  • ಅದಿತಿ ಬಾಪು – 600ಕ್ಕೆ 600 ಅಂಕ
    ಜೈನ್ ಕಾಲೇಜ್, ಬೆಂಗಳೂರು
  • ದಿಶಾ – 600ಕ್ಕೆ 600 ಅಂಕ
    ಆಳ್ವಾಸ್ ಕಾಲೇಜ್, ಮೂಡಬಿದ್ರೆ

ವಿಜ್ಞಾನ ವಿಭಾಗ

  • ಪ್ರಿನ್ಸಿಲಾ ಕಾರ್ಡೋಜಾ – 600ಕ್ಕೆ 599 ಅಂಕ
    ಲರ್ನಿಂಗ್‌ ಸೆಂಟರ್ ಕಾಲೇಜ್,ಮಂಗಳೂರು

ಕಲಾ ವಿಭಾಗ

  • ಸಂಗೀತಾ – 600ಕ್ಕೆ 598 ಅಂಕ
    ಇಂದು ಪಿಯು ಕಾಲೇಜ್, ಕೊಟ್ಟೂರು (ವಿಜಯನಗರ)
  • ಅರ್ಚನಾ – 600ಕ್ಕೆ 598 ಅಂಕ
    ಇಂದು ಪಿಯು ಕಾಲೇಜ್, ಕೊಟ್ಟೂರು (ವಿಜಯನಗರ)

ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಉತ್ತೀರ್ಣ ಅಂಕವನ್ನು ಶೇ.35ರಿಂದ ಶೇ.33ಕ್ಕೆ ನಿಗದಿ ಮಾಡಿರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.13 ರಷ್ಟು ಏರಿಕೆಯಾಗಿದೆ.

ಕಳೆದ ವರ್ಷ 7.7% ಫಲಿತಾಂಶ ಕಡಿಮೆ ದಾಖಲಾಗಿತ್ತು. 6 ಲಕ್ಷದ 32 ಸಾವಿರದ 200 ಪೈಕಿ 5 ಲಕ್ಷದ 46 ಸಾವಿರದ 698 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.72.86, ವಾಣಿಜ್ಯ ವಿಭಾಗದಲ್ಲಿ ಶೇ.88.04 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.86.48 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಬಾಲಕರು 2,32,928 (83.65%) ಹಾಗೂ ಬಾಲಕಿಯರು 3,13,770 (88.07%) ಉತ್ತೀರ್ಣ ಆಗಿದ್ದಾರೆ.

ಶೇ.96.39 ಫಲಿತಾಂಶದೊಂದಿಗೆ ಉಡುಪಿ ಪ್ರಥಮವಾಗಿದ್ದರೆ 71.21% ಫಲಿತಾಂಶದೊಂದಿಗೆ ಯಾದಗಿರಿ ಕೊನೇ ಸ್ಥಾನದಲ್ಲಿದೆ. ನಗರ ಪ್ರದೇಶದಲ್ಲಿ 85.95% ರಿಸಲ್ಟ್ ಬಂದಿದ್ದರೆ ಗ್ರಾಮೀಣ ಭಾಗದಲ್ಲಿ 87.62% ರಿಸಲ್ಟ್ ದಾಖಲಾಗಿದೆ. ಡಿಸ್ಟಿಂಕ್ಷನ್ 1.70 ಲಕ್ಷ, ಪ್ರಥಮ ದರ್ಜೆ 2.95 ಲಕ್ಷ, ದ್ವಿತೀಯ ದರ್ಜೆ 63,957 ಹಾಗೂ ಜಸ್ಟ್ ಪಾಸಾದವರು 16,827 ವಿದ್ಯಾರ್ಥಿಗಳು. 5,577 ಮಕ್ಕಳು ಶೇ.33ರ ಪಾಸಿಂಗ್ ಮಾರ್ಕ್ಸ್‌ನಿಂದ ಪಾಸಾಗಿದ್ದಾರೆ ಎಂದು ತಿಳಿಸಿದರು.

[ad_2]

Source link

Leave a Reply

Your email address will not be published. Required fields are marked *