Advertisement

ನೀಲಿ ಕಂಗಳ ಚೆಲುವೆ ಮೊನಾಲಿಸಾ ಮದುವೆಯ ವಿವಾದಕ್ಕೆ ಹೊಸ ಟ್ವಿಸ್ಟ್‌

[ad_1]

ಕುಂಭಮೇಳದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಭಾರೀ ವೈರಲ್‌ ಆಗಿದ್ದ ನೀಲಿ ಕಂಗಳ ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ತಮ್ಮ ಫರ್ಮಾನ್‌ ಖಾನ್‌ ಎಂಬಾತನನ್ನು ಮದುವೆಯಾಗಿದ್ದು, ಇದೀಗ ಪರಿಶಿಷ್ಟ ಪಂಗಡಗಳ ಆಯೋಗ ನಡೆಸಿದ ತನಿಖೆಯಲ್ಲಿ ಮದುವೆಯ ವೇಳೆ ಮೊನಾಲಿಸಾ ಅಪ್ರಾಪ್ತ ಬಾಲಕಿ ಆಗಿದ್ದಳು ಎನ್ನುವ ಸತ್ಯ ಹೊರಬಿದ್ದಿದೆ.

ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದಕ್ಕೆ ಫರ್ಮಾನ್‌ ಖಾನ್‌ ಮೇಲೆ ಪೋಕ್ಸೋ ಕೇಸ್‌ ದಾಖಲಾಗಿದೆ.

ಮದುವೆಯ ನೋಂದಣಿಯಲ್ಲಿ ಸಲ್ಲಿಸಲಾಗಿದ್ದ ಆಧಾರ್‌ ಕಾರ್ಡ್‌ನಲ್ಲಿ ಆಕೆಗೆ 18 ವರ್ಷ ಎಂದು ನಮೂದಿಸಲಾಗಿತ್ತು. ಆದರೆ ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸರಕಾರಿ ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ, 2009 ಡಿ.30 ರಂದು ಮೊನಾಲಿಸಾ ಜನಿಸಿರುವುದು ದೃಢಪಟ್ಟಿದೆ. ಈ ಪ್ರಕಾರ ಮದುವೆಯ ಸಮಯದಲ್ಲಿ ಮೊನಾಲಿಸಾಗೆ 16ವರ್ಷ 2 ತಿಂಗಳು ವಯಸ್ಸಾಗಿದೆ.

ಆಕೆ ಅಪ್ರಾಪ್ತ ವಯಸ್ಕಳು ಎಂಬುದು ಸಾಬೀತಾದ ಬೆನ್ನಲ್ಲೇ, ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮದುವೆಗಾಗಿ ನಕಲಿ ದಾಖಲೆಗಳನ್ನು ನೀಡಿದ ಆರೋಪದ ಮೇಲೆ ಕೇರಳದ ಸ್ಥಳೀಯ ಅಧಿಕಾರಿಗಳಿಗೂ ಆಯೋಗವು ಸಮನ್ಸ್ ನೀಡಿದೆ.

banner



[ad_2]

Source link

Leave a Reply

Your email address will not be published. Required fields are marked *