Advertisement

50 ಸಾವಿರ ರೂ.ಗೆ ಸ್ನೇಹಿತರಿಗೆ ಪತ್ನಿಯನ್ನೇ ಮಾರಾಟ ಮಾಡಿದ ಪತಿ

[ad_1]

ಗಾಂಧಿನಗರ: ಪತಿಯೋರ್ವ ತನ್ನ ಪತ್ನಿಯನ್ನು ರೂ.50 ಸಾವಿರ ಕ್ಕೆ ತನ್ನ ಸ್ನೇಹಿತರಿಗೇ ಮಾರಾಟ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ. ನಂತರ ಪತಿಯ ಸ್ನೇಹಿತರು ಮಹಿಳೆಯ ಮೇಲೆ 10 ದಿನಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ.11 ರಂದು ಪತಿ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರನ್ನು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಯಾವಾಗ ಪತಿ ದೂರನ್ನು ನೀಡಿದ್ದಾನೋ ಅದರ ಎರಡು ದಿನಗಳಲ್ಲೇ ಆತನು ಕೂಡಾ ನಾಪತ್ತೆಯಾಗಿದ್ದ.

ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ಪತಿಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅನಂತರ ಮಹಿಳೆಯನ್ನೂ ರಕ್ಷಣೆ ಮಾಡಿದ್ದಾರೆ. ಪೊಲೀಸರ ಮುಂದೆ ಸಂತ್ರಸ್ತ ಮಹಿಳೆ ಹೇಳಿಕೆ ನೀಡಿ, ಪತಿ ತನ್ನ ಸ್ನೇಹಿತರಿಗೆ ನನ್ನನ್ನು ರೂ.50 ಸಾವಿರಕ್ಕೆ ಮಾರಾಟ ಮಾಡಿದ್ದಾಗಿ ಆರೋಪ ಮಾಡಿದ್ದಾಳೆ. ಆರೋಪಿಗಳು ತನ್ನ ಚಿನ್ನಾಭರಣಗಳನ್ನು ಕಸಿದು ಸ್ಥಳೀಯ ಜ್ಯುವೆಲ್ಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಪಲನ್‌ಪುರ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಅತ್ಯಾಚಾರ, ಮಾನವ ಕಳ್ಳಸಾಗಣೆ, ಕ್ರಿಮಿನಲ್‌ ಸಂಚು ಸೇರಿ ವಿವಿಧ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪತಿ ಸೇರಿ 7 ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *