Advertisement

ದಾವಣಗೆರೆ: ಮಟ್ಕಾ ಜೂಜಾಟದ ಮೇಲೆ ಪೊಲೀಸ್ ದಾಳಿ; ಇಬ್ಬರ ಬಂಧನ, 44 ಸಾವಿರ ನಗದು ವಶ » Dvgsuddi Kannada | online news portal

[ad_1]

ದಾವಣಗೆರೆ: ಮಟ್ಕಾ ಜೂಜಾಟದ ಮೇಲೆ ಜಿಲ್ಲಾ ಪೊಲೀಸ್ ದಾಳಿ ಮಾಡಿದ್ದು, ಇಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತರಿಂದ 44 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಅಬ್ದುಲ್‌ ಜಬ್ಬಾರ್ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ..?; ಶಾಮನೂರು ಕುಟುಂಬ‌ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ ; ಸಚಿವ ಮಲ್ಲಿಕಾರ್ಜುನ

ಏ. 11ರಂದು ದಾವಣಗೆರೆ ನಗರದ KTJ ನಗರ ಪೊಲೀಸ್ ಠಾಣಾ ವ್ಯಾಪ್ತಿಯ, ಮಧುಮಿತ್ರ ಬಾರ್ ಮುಂಭಾಗ, ಜೈದೇವ ಸರ್ಕಲ್ ಹತ್ತಿರ, ನಿಟುವಳ್ಳಿಯ ಸಾರ್ವಜನಿಕ ರಸ್ತೆ ಯಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ಪೊಲೀಸ್ ಅಧೀಕ್ಷಕರ ನಿರ್ದೇಶನದಲ್ಲಿ ANTF(Anti Narcotic Task Force) ಉಸ್ತುವಾರಿ ಅಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಅಣ್ಣಯ್ಯ ಕೆ.ಟಿ ಮಾರ್ಗದರ್ಶನದಲ್ಲಿ ಪಿಎಸ್ ಐ ಸಾಗರ್ ಅತ್ತರವಲಾ ಸಿಬ್ಬಂದಿಯವರಾದ ಶಿವರಾಜ್, ಪ್ರಕಾಶ್, ಮಂಜಪ್ಪ ಇವರನ್ನು ಒಳಗೊಂಡ ತಂಡ ದಾಳಿ ಮಾಡಿದೆ.

ದಾವಣಗೆರೆ: ಸತತ ಕುಸಿತ ಬಳಿಕ ಭರ್ಜರಿ ಚೇತರಿಕೆ ಕಂಡ ಅಡಿಕೆ ರೇಟ್

ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿತರಿಗಳಾದ 1) ಅನಿಲ್ ಕುಮಾರ್, ದಾವಗೆರೆ, 2) ಹನುಮಂತ, ದಾವಣಗೆರೆ ರವರುಗಳನ್ನು ವಶಕ್ಕೆ ಪಡೆದು, ಜೂಜಾಟದಲ್ಲಿ ತೊಡಗಿಸಿದ್ದ ಒಟ್ಟು 44,000/- ನಗದು ಹಣ ಮತ್ತು ಮಟ್ಕಾ ಚೀಟಿಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[ad_2]

Source link

Leave a Reply

Your email address will not be published. Required fields are marked *