Advertisement

ದಾವಣಗೆರೆ: ಫಲಿತಾಂಶಕ್ಕೆ ಮುನ್ನವೇ ಕಾಂಗ್ರೆಸ್‌ಗೆ ಸೋಲೋ‌ ಭೀತಿ; ಕುಟುಂಬ ರಾಜಕಾರಣಕ್ಕೆ ಸೋಲು ಖಚಿತ; ವಿನಯ್‌ಕುಮಾರ್‌ » Dvgsuddi Kannada | online news portal

[ad_1]

ದಾವಣಗೆರೆ: ದಾವಣಗೆರೆ ದಕ್ಷಣ ಉಪಚುನಾವಣೆಯ ಫಲಿತಾಂಶ ರಾಜ್ಯಕ್ಕೆ ದೊಡ್ಡ ಸಂದೇಶವೊಂದನ್ನು ರವಾನಿಸಲಿದೆ. ಕುಟುಂಬ ರಾಜಕಾರಣ ಸೋಲು ಕಾಣುವುದು ಖಚಿತವಾಗಿದೆ.  ಫಲಿತಾಂಶ ಮುನ್ನವೇ ಕಾಂಗ್ರೆಸ್‌ಗೆ ಸೋಲೋ ಭೀತಿ ಉಂಟಾಗಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಜಿ.ಬಿ. ವಿನಯ್‌ಕುಮಾರ್‌ ಹೇಳಿದರು.

ದಾವಣಗೆರೆ: ಮಟ್ಕಾ ಜೂಜಾಟದ ಮೇಲೆ ಪೊಲೀಸ್ ದಾಳಿ; ಇಬ್ಬರ ಬಂಧನ, 44 ಸಾವಿರ ನಗದು ವಶ

ದಾವಣಗೆರೆ ಉತ್ತರ ಅಥವಾ ಹೊನ್ನಾಳಿಯಿಂದ ಸ್ಪರ್ಧೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಫಲಿತಾಂಶ ರಾಜ್ಯ ರಾಜಕೀಯ ಚಿತ್ರಣ ಬದಲಿಸಿಲಿದೆ. ನಾನು ಬಿಜೆಪಿ ಸೇರ್ಪಡೆಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಅಥವಾ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.

ದಾವಣಗೆರೆ ಉಪಚುನಾವಣೆ; ಮುಸ್ಲಿಂ ಮುಖಂಡರಲ್ಲಿ ಅಸಮಾಧಾನ ಸ್ಫೋಟ; ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ‌ ಸ್ಥಾನಕ್ಕೆ ಜಬ್ಬಾರ್ ರಾಜೀನಾಮೆ

ಬಿಜೆಪಿ ಗೆಲ್ಲುವ ವಿಶ್ವಾಸ

ಉಪಚುನಾವಣೆಯಲ್ಲಿ‌ ಸ್ವಾಭಿಮಾನಿ ಬಳಗವು ಬಿಜೆಪಿ ಅಭ್ಯರ್ಥಿ ಟಿ.ಶ್ರೀನಿವಾಸ ದಾಸಕರಿಯಪ್ಪ ಬೆಂಬಲಿಸಿದೆ‌. ಗ್ರಾಮೀಣ ಪ್ರದೇಶದಲ್ಲಿ ‍‍ಪಾದಯಾತ್ರೆ ನಡೆಸಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗಿದೆ. ಬಿಜೆಪಿ ಗೆಲ್ಲುವ ವಿಶ್ವಾಸವಿದೆ‌ ಎಂದರು.

ಕಾಂಗ್ರೆಸ್‌ ದುರಾಡಳಿತದ ವಿರುದ್ಧ ಜನರು ಆಕ್ರೋಶ

ಬಿಜೆಪಿ ಸಾಂಪ್ರದಾಯಿಕ ಮತಗಳು ಚದುರಿಲ್ಲ. ಅಹಿಂದ ವರ್ಗವನ್ನು ಕಾಂಗ್ರೆಸ್‌ ಕೇವಲ ಮತಬ್ಯಾಂಕ್‌ ಆಗಿ ಮಾಡಿಕೊಂಡಿದೆ. ಈ ಫಲಿತಾಂಶ ಕಾಂಗ್ರೆಸ್‌ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಲಿದೆ. ಬಹಿರಂಗ ಆರೋಪ-ಪ್ರತ್ಯಾರೋಪಗಳು, ಶೋಷಿತ ವರ್ಗಗಳ ಸ್ವಾಭಿಮಾನದ ಚುನಾವಣೆ ಇದಾಗಿದೆ. ಕಾಂಗ್ರೆಸ್‌ ದುರಾಡಳಿತದ ವಿರುದ್ಧವಾಗಿ ಜನರು ಆಕ್ರೋಶ ಹೊರಹಾಕಲಿದ್ದಾರೆ ಎಂದು ಭವಿಷ್ಯ ನುಡಿದರು.

ಅಬ್ದುಲ್‌ ಜಬ್ಬಾರ್ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ..?; ಶಾಮನೂರು ಕುಟುಂಬ‌ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ ; ಸಚಿವ ಮಲ್ಲಿಕಾರ್ಜುನ

ನಗುತ್ತಲೇ ಚುನಾವಣೆ ಮಾಡಿದ್ದೇವೆ

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ನಗುತ್ತ ಚುನಾವಣೆ ಮಾಡುವಂತೆ ಕರೆ‌ ನೀಡಿದ್ದರು. ಇದಕ್ಕೆ ಬಿಜೆಪಿ ನಾಯಕರು, ಸ್ವಾಭಿಮಾನಿ ಬಳಗ, ಮುಸ್ಲಿಂ ಸಮುದಾಯ ನಗುತ್ತಲೇ ಹಕ್ಕು ಚಲಾವಣೆ ಮಾಡಿದೆ. ಫಲಿತಾಂಶವನ್ನು ಸಹ ನಗುತ್ತಲೇ ಸ್ವೀಕರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ವಿರೂಪಾಕ್ಷಪ್ಪ ಪಂಡಿತ್, ಪರಶುರಾಮ, ಶಿವಕುಮಾರ್ ಶೆಟ್ಟರ್, ರೇವಂತ್ ಕೊಳೇನಹಳ್ಳಿ ಹಾಜರಿದ್ದರು.

 

 

[ad_2]

Source link

Leave a Reply

Your email address will not be published. Required fields are marked *