[ad_1]
ದಾವಣಗೆರೆ: ನಗರದಲ್ಲಿ ನಿವೃತ್ತ ಪ್ರಾಂಶುಪಾಲರೊಬ್ಬರಿಗೆ ಡಿಜಿಟಲ್ ಕಸ್ಟಡಿ ಮಾಡಿ ಬ್ಯಾಂಕ್ ಖಾತೆಯ ಕೆವೈಸಿ ಹಾಗೂ ಮನಿ ಲಾಂಡರಿಂಗ್ ಹೆಸರಿನಲ್ಲಿ ಬೆದರಿಕೆ ಹಾಕಿ 15 ಲಕ್ಷ ರೂ.ಗೂ ಅಧಿಕ ಹಣ ವರ್ಗಾವಣೆ ಮಾಡಿಸಿಕೊಂಡ ವಂಚಿಸಿದ ಘಟನೆ ನಡೆದಿದೆ.
ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ; ಹವಾಮಾನ ಇಲಾಖೆ ಮುನ್ಸೂಚನೆ
ನಗರದ ಎಸ್‌ಎಸ್ ಲೇಔಟ್ ಎ ಬ್ಲಾಕ್ ನಿವಾಸಿ, 79 ವರ್ಷದ ನಿವೃತ್ತ ಪ್ರಾಂಶುಪಾಲರು ವಂಚನೆಗೊಳದವರು. ಕಳೆದ ಮಾರ್ಚ್ 25ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ನಾವು ಮುಂಬೈ ಕಸ್ಟಮ್ಸ್ ಕಚೇರಿಯಿಂದ ಮಾತನಾಡುತ್ತಿದ್ದೇವೆ. ನಿಮ್ಮ ಐಡಿ ಕಾರ್ಡ್ ಬಳಸಿ ಮುಂಬೈ ಕೆನರಾ ಬ್ಯಾಂಕ್‌ನಲ್ಲಿ ಯಾರೋ ಒಬ್ಬರು ಖಾತೆಯೊಂದನ್ನು ತೆರೆಯಲಾಗಿದ್ದು, ಅದರ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ.
ನಿಮ್ಮ ಹೆಸರಿನಲ್ಲಿ ದಾಖಲಾಗಿರುವ ಈ ಪ್ರಕರಣದ ತನಿಖೆ ಮುಗಿಯುವವರೆಗೆ ನಾವು ನಿಮ್ಮನ್ನು ಡಿಜಿಟಲ್ ಕಸ್ಟಡಿಯಲ್ಲಿ ಇರಿಸಬೇಕಾಗುತ್ತದೆ. ತನಿಖೆಗೆ ಸಹಕರಿಸಲು ನೀವು ಹಣವನ್ನು ಡೆಪಾಸಿಟ್ ಇಡಬೇಕು. ಒಂದು ವೇಳೆ ತನಿಖೆಯಲ್ಲಿ ನೀವು ನಿರ್ದೋಷಿ ಎಂದು ಸಾಬೀತಾದರೆ ಈ ಹಣವನ್ನು ವಾಪಸ್ ಮಾಡಲಾಗುವುದು ಎಂದು ನಂಬಿಸಿದ್ದಾರೆ.
ಆರೋಪಿಗಳ ಮಾತನ್ನು ನಂಬಿದ ನಿವೃತ್ತ ಪ್ರಾಂಶುಪಾಲರು, ಮಾರ್ಚ್ 31 ರಂದು ತಮ್ಮ ಬ್ಯಾಂಕ್ ಖಾತೆಯಿಂದ ವಿವಿಧ ಹಂತಗಳಲ್ಲಿ ಒಟ್ಟು 15 ಲಕ್ಷ 12 ಸಾವಿರ ರೂ. ಹಣವನ್ನು ಆರ್.ಟಿ.ಜಿ.ಎಸ್ ಮಾಡಿಸ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆ ಮಾಡಿದ ವಿಚಾರವನ್ನು ಯಾರಿಗೂ ತಿಳಿಸದಂತೆ ವಂಚಕರು ಬೆದರಿಕೆ ಹಾಕಿದ್ದಾರೆ.
ಪತ್ರಿಕೆಯಲ್ಲಿ ಇಂತಹದ್ದೇ ಪ್ರಕರಣ ಸುದ್ದಿ ಓದಿದ ನಂತರ ಪ್ರಾಂಶುಪಾಲರಿಗೆ ವಂಚನೆಗೊಳಗಾಗಿರುವುದು ತಿಳಿದೆ. ತಕ್ಷಣವೇ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದಾರೆ.
[ad_2]
Source link

















Leave a Reply