Advertisement

Recharge: ಜನಸಾಮಾನ್ಯರಿಗೆ ಗುಡ್ ನ್ಯೂಸ್ – ಇಂಟರ್ನೆಟ್ ಬೇಡದವರಿಗೆ ಬಂತು ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್‌ಗಳು!

[ad_1]

Recharge: ಇತ್ತೀಚೆಗೆಸಂಸತ್ ಅಧಿವೇಶನದಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಬಳಕೆಯಾಗದೆ ಉಳಿಯುವ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಟೆಲಿಕಾಂ ಕಂಪನಿಗಳು ಅನುಮತಿ ನೀಡಬೇಕು, ಅಲ್ಲದೆ ಇಂಟರ್ನೆಟ್ ಬೇಡದವರಿಗೆ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ತಮ್ಮ ವಾದವನ್ನು ಮಂಡಿಸಿದ್ದರು. ಇದೀಗ ಈ ವಿಚಾರವಾಗಿ ಜನಸಾಮಾನ್ಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಸಾಮಾನ್ಯವಾಗಿ ನಾವು ಇಂಟರ್ನೆಟ್ ಡೇಟಾ ಹಾಕಿಸುವ ಸಂದರ್ಭದಲ್ಲಿ 1.5GB, 2GB, 3GB ಎಂಬಂತೆ ರಿಚಾರ್ಜ್ ಮಾಡಿಕೊಳ್ಳುತ್ತೇವೆ. ಟೆಲಿಕಾಂ ಕಂಪನಿಗಳು ಇದನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿರುತ್ತವೆ. 24 ಗಂಟೆ ಮುಗಿದ ಬಳಿಕ ಹೊಸ ಇಂಟರ್ನೆಟ್ ಡೇಟಾ ಆರಂಭವಾಗುತ್ತದೆ. ಆದರೆ ನಾವು ಕೆಲವೊಮ್ಮೆ ಒಂದು ದಿನದಲ್ಲಿ ಕಂಪ್ಲೀಟ್ ಡೇಟಾ ವನ್ನು ಬಳಸುವುದಿಲ್ಲ. ಇದೆ ಬಳಸದೆ ಉಳಿಯುವ ಇಂಟರ್ನೆಟ್ ಡೇಟಾವನ್ನು ಕಂಪನಿಗಳು ಹಿಂಪಡೆಯುತ್ತವೆ. ಆದರೆ ನಾವು ಅದಕ್ಕೆ ಸಂಪೂರ್ಣವಾಗಿ ಹಣವನ್ನು ಪಾವತಿಸಿರುತ್ತೇವೆ. ಹೀಗಾಗಿ ಬಳಕೆಯಾಗದೆ ಉಳಿದ ಇಂಟರ್ನೆಟ್ ಡೇಟಾವನ್ನು ಮರುದಿನ ಬಳಸಲು ಅನುಮತಿ ನೀಡಬೇಕೆಂದು ಸಂಸತ್ತಿನಲ್ಲಿ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಅವರು ಧ್ವನಿಯೆತ್ತಿದ್ದರು. 

ಭಾರತದಲ್ಲಿ ಕೋಟ್ಯಂತರ ಜನ ಈಗಲೂ ಕೀಪ್ಯಾಡ್ ಫೋನ್ ಬಳಸುತ್ತಿದ್ದಾರೆ. ಅವರಿಗೆ ಇಂಟರ್ನೆಟ್ ಅವಶ್ಯಕತೆ ಇಲ್ಲ. ಆದರೂ ಅವರು ಡೇಟಾ ಪ್ಯಾಕ್‌ಗಳಿಗಾಗಿ ಹಣ ನೀಡಬೇಕಾಗುತ್ತಿದೆ. ಕಂಪನಿಗಳು ಕೇವಲ ಕರೆ ಮಾಡಲು ಸೀಮಿತವಾದ (Voice-only) ಅಗ್ಗದ ಪ್ಲ್ಯಾನ್‌ಗಳನ್ನು ಏಕೆ ತರುತ್ತಿಲ್ಲ?” ಎಂದು ಅವರು ಪ್ರಶ್ನಿಸಿದ್ದರು. ಸಂಸದ ರಾಘವ್ ಚಡ್ಡಾ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಿದ ನಂತರ, ಟೆಲಿಕಾಂ ಕಂಪನಿಗಳು ಒಂದು ದೊಡ್ಡ ನಿರ್ಧಾರಕ್ಕೆ ಬಂದಿವೆ ಎಂಬ ಸುದ್ದಿ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇದು ಸಾಮಾನ್ಯ ಜನರಿಗೆ, ವಿಶೇಷವಾಗಿ ನಮ್ಮ ಹಿರಿಯರಿಗೆ ಮತ್ತು ರೈತರಿಗೆ ಸಿಕ್ಕಿದ ಅತಿದೊಡ್ಡ ಜಯ ಎಂದೇ ಹೇಳಬಹುದು. 

 ಸಂಸದರ ಧ್ವನಿಗೆ ಕಿವಿ ಕೊಟ್ಟಿರುವ ಟೆಲಿಕಾಂ ಕಂಪನಿಗಳು ಇದೀಗ ರೈತರು ಬಡವರು ಶ್ರಮಜೀವಿಗಳು ಹಾಗೂ ಮಕ್ಕಳಿಗೆ ಸೇರಿದಂತೆ ಇಂಟರ್ನೆಟ್ ಬೇಡವಾದವರಿಗೆ ಅನುಕೂಲವಾಗುವಂತೆ ಕಡಿಮೆ ಬೆಲೆಯ ಟಾಕ್ ಟೈಮ್ ರಿಚಾರ್ಜ್ ಪ್ಲಾನ್ ಗಳನ್ನು ಜಾರಿಗೆ ತರಲು ಮುಂದಾಗಿವೆ ಎನ್ನಲಾಗಿದೆ. ಈಗ ಬರಲಿರುವ ಪ್ಲ್ಯಾನ್‌ಗಳು ಬಹುಶಃ 100 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಸಿಗಬಹುದು ಎಂಬ ನಿರೀಕ್ಷೆಯಿದೆ. ಇದರಲ್ಲಿ ಅನ್‌ಲಿಮಿಟೆಡ್ ಕರೆಗಳು ಅಥವಾ ತಿಂಗಳಿಗೆ ನಿಗದಿತ ನಿಮಿಷಗಳ ಸಂಭಾಷಣೆಗೆ ಅವಕಾಶ ಇರಲಿದೆ. ಇದರಿಂದ ಜನರು ತಿಂಗಳಿಗೊಮ್ಮೆ ಸಾವಿರಾರು ರೂಪಾಯಿ ಖರ್ಚು ಮಾಡುವುದು ತಪ್ಪುತ್ತದೆ.

banner



[ad_2]

Source link

Leave a Reply

Your email address will not be published. Required fields are marked *