[ad_1]
1
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಶಾಖೆಗಳು ದೇಶಾದ್ಯಂತ ಸತತ 5ರಿಂದ 6 ದಿನಗಳ ಕಾಲ ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಿವೆ.


ಮೇ 23 ರಿಂದ 28 ರವರೆಗೆ ವಿವಿಧ ಕಾರಣಗಳಿಗೆ ಬ್ಯಾಂಕಿಂಗ್ ಸೇವೆ ಸ್ಥಗಿತವಾಗಲಿದೆ. ಹೀಗಾಗಿ ಗ್ರಾಹಕರ ಬ್ಯಾಂಕಿಂಗ್ ವಹಿವಾಟುಗಳಿಗೆ ಅಡಚಣೆಯಾಗುವ ಸಂಭವವಿದೆ.
ಮೇ 23ರಂದು ನಾಲ್ಕನೇ ಶನಿವಾರ ರಜೆ ಇರುತ್ತದೆ. ಮೇ 24 ರಂದು ಭಾನುವಾರ ಸಾರ್ವತ್ರಿಕ ರಜೆ ಕಾರಣಕ್ಕೆ ಬ್ಯಾಂಕ್ ಬಂದ್ ಆಗಲಿದೆ. ನಂತರ ಮೇ 25 ಮತ್ತು 26ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನ ಮುಷ್ಕರಕ್ಕೆ ಕರೆ ನೀಡಿದ್ದು, ಹೀಗಾಗಿ ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ಕಾರ್ಯ ಚಟುವಟಿಕೆಗಳು ಬಹುತೇಕ ಸ್ಥಗಿತವಾಗಲಿದೆ.
ಅಲ್ಲದೆ ಮೇ 27 ಮತ್ತು 28 ರಂದು ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕಿಗೆ ರಜೆ ಇರುತ್ತದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ದಿನಗಳಂದು ಬಕ್ರಿದ್ ಆಚರಣೆ ನಡೆಯಲಿದೆ. ಹೀಗಾಗಿ ಕೆಲವು ಕಡೆ ಮೇ 27ರಂದು ಬ್ಯಾಂಕಿಗೆ ರಜೆ ಇದ್ದರೆ, ಮತ್ತೆ ಕೆಲವು ಕಡೆ ಮೇ 28ರಂದು ರಜೆ ನೀಡಲಾಗಿದೆ. ಹೀಗಾಗಿ ಮೇ 28 ರ ವರೆಗೂ ಬ್ಯಾಂಕಿಂಗ್ ಶಾಖೆಗಳಲ್ಲಿ ಸೇವೆಯಲ್ಲಿ ವ್ಯತ್ಯಯವಾಗಲಿದೆ.
[ad_2]
Source link













Leave a Reply