Advertisement

ಅಮೆರಿಕ- ಇರಾನ್ ಕದನ ವಿರಾಮ ಬೆನ್ನಲ್ಲೇ ಚಿನ್ನ, ಬೆಳ್ಳಿ ದರದಲ್ಲಿ ಭರ್ಜರಿ ಏರಿಕೆ!!

[ad_1]

Gold-Silver : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾದದಾಗಿನಿಂದಲೂ ಚಿನ್ನದ ದರದಲ್ಲಿ ಏರಿಕೆ, ಇಳಿಕೆ ಕಾಣುತ್ತಲೇ ಇತ್ತು. ಆದರೂ ಕೂಡ ಮೊದಲಿದ್ದರಕ್ಕಿಂತ ಚಿನ್ನ ಬೆಳ್ಳಿ ದರಗಳು ಬಾರಿ ಇಳಿಕೆ ಕಂಡಿದ್ದವು. ಇದೀಗ ಅಮೆರಿಕ ಮತ್ತು ಇರಾನಿ ಕದನ ವಿರಾಮ ಘೋಷಿಸಿದ ಬೆನ್ನೆಲು ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತೆ ಏರಿಕೆ ಕಂಡಿದೆ.

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನ 3980 ರು. ಏರಿಕೆಯೊಂದಿಗೆ 1,53,820 ರು.ಗೆ ತಲುಪಿದ್ದರೆ, 22 ಕ್ಯಾರಟ್‌ನ 10 ಗ್ರಾಂ ಚಿನ್ನ 3650 ರು. ಹೆಚ್ಚಳದೊಂದಿಗೆ 1,41,000 ರು. ಆಗಿದೆ. ಇನ್ನು ಕೇಜಿ ಬೆಳ್ಳಿ ದರ 10,000 ರು. ಏರಿಕೆಯಾಗಿ 2,60,000 ರು.ಗೆ ತಲುಪಿದೆ.

ಮಂಗಳವಾರ ಕೇಜಿ ಬೆಳ್ಳಿ ದರ 2.40 ಲಕ್ಷ ರು., 10 ಗ್ರಾಂ ಚಿನ್ನದ ಬೆಲೆ 1,53,200 ರು.ಗಳಷ್ಟಿತ್ತು. ಜಾಗತಿಕವಾಗಿ ರಾಜಕೀಯ ಉದ್ವಿಗ್ನತೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.



[ad_2]

Source link

Leave a Reply

Your email address will not be published. Required fields are marked *