Advertisement

ದಾವಣಗೆರೆ: ಜಿಲ್ಲೆಯ ಎಲ್ಲಾ ಆಹಾರ ಉದ್ದಿಮೆದಾರರಿಗೆ ಫೋಸ್ಟಾಕ್ ತರಬೇತಿ, ಪ್ರಮಾಣ ಪತ್ರ ಕಡ್ಡಾಯ » Dvgsuddi Kannada | online news portal

[ad_1]

ದಾವಣಗೆರೆ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಸೆಕ್ಷನ್ 16(3)(h) ಪ್ರಕಾರ ಪ್ರತಿಯೊಬ್ಬ ಆಹಾರ ಉದ್ದಿಮೆದಾರರು (FBOs) ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರವನ್ನು (FoSTaC) ಪಡೆದು ಉದ್ದಿಮೆಯನ್ನು ನಡೆಸುವುದು ಕಡ್ಡಾಯವಾಗಿರುತ್ತದೆ.

ಆಹಾರ ತಯಾರಕರು, ಮಾರಾಟಗಾರರು, ಬೇಕರಿಯವರು, ಹೋಟೆಲ್‌ಗಳು ಹಾಗೂ ಆಹಾರ ಸಂಸ್ಕರಣಾ ಉದ್ದಿಮೆದಾರರು ಕಡ್ಡಾಯವಾಗಿ ತರಬೇತಿ ಪಡೆಯಬೇಕು. ಆಹಾರ ವಹಿವಾಟು ನಡೆಸುವ ಜಾಗದಲ್ಲಿ ಕನಿಷ್ಠ ಪ್ರತಿ 25 ಜನರಿಗೆ ಒಬ್ಬರಂತೆ ಫೋಸ್ಟಾಕ್ (FoSTaC) ತರಬೇತಿಯನ್ನು ಪಡೆದು ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಕೇಂದ್ರ FSSAI ವತಿಯಿಂದ ಮಾನ್ಯತೆ ಪಡೆದ ಎಂಪನೆಲ್ಡ್ ಟ್ರೈನಿಂಗ್ ಪಾರ್ಟ್ನರ್ ಆಗಿರುವ ‘ನ್ಯಾಷನಲ್ ಮ್ಯಾನೇಜ್ಮೆಂಟ್ ಟ್ರೈನಿಂಗ್ ಇನ್ಸ್ಟಿಟ್ಯೂಟ್’ (National Management Training Institute) ಸಂಸ್ಥೆಯು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ತರಬೇತಿ ನೀಡಲು ಅಧಿಕೃತಗೊಂಡಿದೆ. ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯಿತಿಗಳು, ಪುರಸಭೆಗಳು ಹಾಗೂ ಒಟ್ಟು 196 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಉದ್ದಿಮೆದಾರರಿಗೆ ಇದು ಅನ್ವಯಿಸುತ್ತದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಜಿಲ್ಲಾ ಸಂಯೋಜಕರ ಸುಮಾ ಎಸ್. ಎಂ 9035266120 ಅಥವಾ ಜಯಶ್ರೀ ಸಿ 9187663727 ರವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಉದ್ದಿಮೆದಾರರು ಈ ತರಬೇತಿಯನ್ನು ಪಡೆದು ಸಹರಿಸುವಂತೆ ಸಂಯೋಜಕರು ತಿಳಿಸಿದ್ದಾರೆ.

 

[ad_2]

Source link

Leave a Reply

Your email address will not be published. Required fields are marked *