Advertisement

BSNL: Jio, Airtel ಗೆ ಬಿಗ್ ಶಾಕ್ ಕೊಟ್ಟ BSNL

[ad_1]

BSNL: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ ಬಿಎಸ್ಎನ್ಎಲ್, ವೈದ್ಯ ಟೆಲಿಕಾಂ ಕಂಪನಿಗಳಾದ ಜಿಯೋ ಏರ್ಟೆಲ್ ಗೆ ಬಿಗ್ ಶಾಕ್ ನೀಡಿದ್ದು ದಿನಕ್ಕೆ 3ಜಿಪಿ ಡೇಟಾ ನೀಡುವ ಬೊಂಬಾಟ್ ಪ್ಲಾನ್ ಅನ್ನು ಪರಿಚಯಿಸಿದೆ.

ಯಸ್, BSNL ಹೊಸ ಪ್ಲ್ಯಾನ್ ಒಂದನ್ನು ಪರಿಚಯಿಸಿದೆ. ಕೇವಲ ₹599 ಕ್ಕೆ 70 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 3GB ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಂಟರ್ನೆಟ್ ಬಯಸುವವರಿಗೆ ಇದೊಂದು ವರದಾನವೇ ಸರಿ.

ಈ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ಬರೋಬ್ಬರಿ 70 ದಿನಗಳ ವ್ಯಾಲಿಡಿಟಿ ಸಿಗಲಿದೆ. ಈ ₹599 ಪ್ಲ್ಯಾನ್‌ನಲ್ಲಿ, ಬಳಕೆದಾರರು ಪ್ರತಿದಿನ 3GB ಹೈ-ಸ್ಪೀಡ್ ಡೇಟಾವನ್ನು ಪಡೆಯುತ್ತಾರೆ. ಅಂದರೆ, 70 ದಿನಗಳಲ್ಲಿ ಒಟ್ಟು 210GB ಡೇಟಾ ಸಿಗುತ್ತದೆ. ಅಷ್ಟೇ ಅಲ್ಲ, ದಿನಕ್ಕೆ 100 ಎಸ್‌ಎಂಎಸ್‌ಗಳು ಉಚಿತವಾಗಿ ಲಭ್ಯವಿದೆ. ಡೇಟಾ ಜೊತೆಗೆ, ಭಾರತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯವೂ ಇದೆ.

ಈ ಪ್ಲ್ಯಾನ್ ಕೇವಲ ಡೇಟಾ ಮತ್ತು ಕಾಲಿಂಗ್‌ಗೆ ಸೀಮಿತವಾಗಿಲ್ಲ. ಇದರಲ್ಲಿ ಉಚಿತವಾಗಿ BiTV ಆಯಪ್‌ನ ಆಯಕ್ಸೆಸ್ ಕೂಡ ಸಿಗುತ್ತದೆ. ಇದರ ಮೂಲಕ ಬಳಕೆದಾರರು ಲೈವ್ ಟಿವಿ ಚಾನೆಲ್‌ಗಳನ್ನು ನೋಡಬಹುದು. ಯಾವುದೇ ಹೆಚ್ಚುವರಿ ಚಂದಾದಾರಿಕೆ ಇಲ್ಲದೆ ಮನರಂಜನಾ ಕಂಟೆಂಟ್ ಮತ್ತು ಕೆಲವು ಓಟಿಟಿ ಶೋಗಳನ್ನು ನೋಡುವ ಅವಕಾಶವಿದೆ. ಅಂದರೆ, ಇಂಟರ್ನೆಟ್ ಜೊತೆಗೆ ಮನರಂಜನೆಯೂ ಫ್ರೀ ಇರಲಿದೆ.

banner



[ad_2]

Source link

Leave a Reply

Your email address will not be published. Required fields are marked *