Advertisement

ತರಳಬಾಳು ಮಠದಿಂದ ಪ್ರತಿಭಾನ್ವಿತ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ » Dvgsuddi Kannada | online news portal

[ad_1]

ಸಿರಿಗೆರೆ: ತರಳಬಾಳು ಮಠದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ಉಚಿತ ಪಿಯುಸಿ ಶಿಕ್ಷಣಕ್ಕೆ ತರಳಬಾಳು ಪ್ರತಿಭಾ ಪುರಸ್ಕಾರ ಯೋಜನೆ  ರೂಪಿಸಿದೆ.

ಹಲವು ದಾನಿಗಳು ಮಠದಲ್ಲಿ ಸ್ಥಾಪಿಸಿರುವ ದತ್ತಿ ಹಣದಲ್ಲಿ ಬರುವ ಆದಾಯವನ್ನು ಬಳಸಿಕೊಳ್ಳಲಾಗುವುದು. ಉಚಿತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಏ.27ರ ಸೋಮವಾರ ಬೆಳಿಗ್ಗೆ 11ಗಂಟೆಗೆ ಸಿರಿಗೆರೆಯ ಎಂಬಿಆರ್‌ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಲಿಖಿತ ಪರೀಕ್ಷೆಯನ್ನು ಬರೆಯಬೇಕು.
ಲಿಖಿತ ಪರೀಕ್ಷೆ ತೆಗೆದುಕೊಳ್ಳಲು ಎಸ್‌ಎಸ್‌ಎಲ್‌ಸಿ
ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು
ತೆಗೆದುಕೊಂಡಿರಬೇಕು.

ವಿದ್ಯಾರ್ಥಿಗಳು ಯಾವುದೇ ಜಿಲ್ಲೆಯವರಾಗಿರಬಹುದು. ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳೂ ಸಹ ಪರೀಕ್ಷೆ ತೆಗೆದುಕೊಳ್ಳ
ಬಹುದು. ಲಿಖಿತ ಪರೀಕ್ಷೆಯಲ್ಲಿ ಅರ್ಹರಾದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕವನ್ನು ಮಠದಿಂದ ಭರಿಸಲಾಗುವುದಲ್ಲದೆ, ಉಚಿತ ಹಾಸ್ಟೆಲ್ ಸೌಲಭ್ಯವನ್ನು ಸಹ ನೀಡಲಾಗುವುದು. ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಏ.26 ಕೊನೆಯ ದಿನಾಂಕ. ಮಾಹಿತಿಗಾಗಿ ಮೊ.ಸಂ: 99869 85206, 9663956275, 97387 08051 ಸಂಪರ್ಕಿಸಬಹುದು.

[ad_2]

Source link

Leave a Reply

Your email address will not be published. Required fields are marked *