Advertisement

ದೇಶದಲ್ಲಿ ಆಹಾರ, ಕುಡಿಯುವ ನೀರಿಗೆ ಸಧ್ಯದಲ್ಲೇ ಹಾಹಾಕಾರ

[ad_1]

ರಾಜಕಾರಣ ಹಾಗೂ ಪ್ರಕೃತಿಯಲ್ಲಿ ನಡೆಯುವ ಹಲವಾರು ಮಹತ್ವದ ಬದಲಾವಣೆಗಳ ಕುರಿತು ಆಗಾಗ ಭವಿಷ್ಯ ನುಡಿಯುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೋಡಿಮಠದ  ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಇದೀಗ ಮತ್ತೆ ಅಚ್ಚರಿಯ ಭವಿಷ್ಯ ನುಡಿದಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ ಮತ್ತು ನೀರಿನ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಶ್ರೀ ಬಂಡೆ ಶನೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಮಹಾ ರಾಜಗೋಪುರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ದೇಶದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿಗೆ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿ ಅಪಮೃತ್ಯು (ಅಕಾಲಿಕ ಮರಣ)ಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಲಿದೆ ಎಂಬ ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ.

‘ದೇಶದಲ್ಲಿ ಹವಾಮಾನದ ಏರುಪೇರುಗಳು ಗಂಭೀರ ಸ್ವರೂಪ ತಾಳುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದಲ್ಲಿ ವಿಪರೀತ ಏರಿಕೆ ಇವೆಲ್ಲವುಗಳ ಸಂಯೋಜನೆಯಿಂದಾಗಿ ಭೂಮಿ ಮತ್ತು ನೀರಿನ ಸಾಮರ್ಥ್ಯ ಕುಸಿಯುತ್ತದೆ. ಇದರ ಪರಿಣಾಮ ಬೆಳೆ ವಿಫಲವಾಗಿ, ಕೃಷಿಕರು ತೀವ್ರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಕೃಷಿ ಉತ್ಪನ್ನದ ಕೊರತೆಯಿಂದ ಆಹಾರದ ದರಗಳು ಆಕಾಶ ಮುಟ್ಟಬಹುದು. ಕುಡಿಯುವ ನೀರಿನ ಬಾವಿಗಳು, ಕೆರೆಗಳು ಬತ್ತಿ ಹೋಗುತ್ತವೆ. ಸಾರ್ವಜನಿಕ ಆರೋಗ್ಯದ ಮೇಲೂ ವ್ಯಾಪಕ ಪರಿಣಾಮ ಉಂಟಾಗುತ್ತದೆ’ ಎಂದರು.

ಅಲ್ಲದೆ ಕೋಡಿಮಠ ಶ್ರೀಗಳ ಕರ್ನಾಟಕದ ಕುರಿತ ಹೇಳಿಕೆ ಸಮಾಧಾನದ ಸುದ್ದಿ ತಂದಿದೆ. ‘ದೇಶಾದ್ಯಂತ ಈ ತೊಂದರೆಗಳು ಕಾಡಿದರೂ, ಕರ್ನಾಟಕ ರಾಜ್ಯಕ್ಕೆ ಮಾತ್ರ ಯಾವುದೇ ದೊಡ್ಡ ಮಟ್ಟದ ಗಂಡಾಂತರ ಅಥವಾ ಅನಾಹುತಗಳು ಸಂಭವಿಸುವುದಿಲ್ಲ. ನಮ್ಮ ರಾಜ್ಯದಲ್ಲಿ ದೈವಾರಾಧನೆ, ಪ್ರಕೃತಿ ಪೂಜೆ, ಹಾಗೂ ಶನೇಶ್ವರನ ಕೃಪೆಯಿಂದಾಗಿ ಸಮೃದ್ಧಿಯೇ ಮೇಲುಗೈ ಸಾಧಿಸಲಿದೆ’ ಎಂದು ಶ್ರೀಗಳು ಹೇಳಿದರು. 

banner



[ad_2]

Source link

Leave a Reply

Your email address will not be published. Required fields are marked *