Advertisement

ದಾವಣಗೆರೆ: ಏ.30ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2: ಸುಗಮ ಪರೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ » Dvgsuddi Kannada | online news portal

[ad_1]

ದಾವಣಗೆರೆ: ಜಿಲ್ಲೆಯಲ್ಲಿ ಮುಂಬರುವ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ-2 ಅನ್ನು ಅತ್ಯಂತ ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಪದವಿಪೂರ್ವ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ದಾವಣಗೆರೆ:‌ ಮೂರು ದಿನ ಜಲಸಿರಿ ಕುಡಿಯುವ ನೀರಿನಲ್ಲಿ ವ್ಯತ್ಯಯ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ-2 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಏಪ್ರಿಲ್ 30 ರಿಂದ ಮೇ 13 ರವರೆಗೆ ಜಿಲ್ಲೆಯ ವಿವಿಧ ದಿನಾಂಕಗಳಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ, ಪರೀಕ್ಷೆ ನಡೆಯುವ ದಿನದಂದು ಆಯಾ ವಿಷಯದ ಉಪನ್ಯಾಸಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಬಾರದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು. ಸುಗಮ ಮತ್ತು ದೋಷರಹಿತ ಪರೀಕ್ಷೆಗಾಗಿ ಜಿಲ್ಲಾಡಳಿತವು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿದ್ದು, ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.

ದಾವಣಗೆರೆ: ಸರ್ಕಾರಿ ಐಟಿಐ ಪ್ರವೇಶಾತಿಗೆ ಅರ್ಜಿ ಆಹ್ವಾನ

ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕರಾದ ಪಳಿನಿಸ್ವಾಮಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 2995 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ದಾವಣಗೆರೆ (1629), ಜಗಳೂರು (391), ಚನ್ನಗಿರಿ (401), ಹರಿಹರ (321) ಹಾಗೂ ಹೊನ್ನಾಳಿ (250). ವಿದ್ಯಾರ್ಥಿಗಳು, ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಇರಿಸಲಾಗಿದ್ದು, ಅಲ್ಲಿ 24×7 ಸಿಸಿಟಿವಿ ಕಣ್ಗಾವಲು ಹಾಗೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ಸಾಗಿಸುವ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ 7 ಪರೀಕ್ಷಾ ಕೇಂದ್ರಗಳು

ದಾವಣಗೆರೆ ತಾಲ್ಲೂಕು: ಸರ್ಕಾರಿ ಮೋತಿವೀರಪ್ಪ ಪಿಯು ಕಾಲೇಜು, ಸರ್ಕಾರಿ ಪಿಯು ಕಾಲೇಜು (ಬಾಲಕಿಯರ) ಪಿ.ಜೆ ಬಡಾವಣೆ, ಹಾಗೂ ಸರ್ಕಾರಿ ಮುನ್ಸಿಪಲ್ ಪಿಯು ಕಾಲೇಜು.
ಹರಿಹರ ತಾಲ್ಲೂಕು: ಸರ್ಕಾರಿ ಡಿ.ಆರ್.ಎಂ ಪಿಯು ಕಾಲೇಜು.ಜಗಳೂರು ತಾಲ್ಲೂಕು: ಸರ್ಕಾರಿ ಪಿಯು ಕಾಲೇಜು.ಚನ್ನಗಿರಿ ತಾಲ್ಲೂಕು: ಸರ್ಕಾರಿ ಪಿಯು ಕಾಲೇಜು.ಹೊನ್ನಾಳಿ ತಾಲ್ಲೂಕು: ಸರ್ಕಾರಿ ಪಿಯು ಕಾಲೇಜು.

ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಫೋನ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ. ಪ್ರತಿ ಕೇಂದ್ರಕ್ಕೂ ಒಬ್ಬೊಬ್ಬ ವೀಕ್ಷಕರನ್ನು ನೇಮಿಸಲಾಗಿದ್ದು, ಸಿಸಿಟಿವಿ ಕಣ್ಗಾವಲು ಇರಲಿದೆ. ಅನಗತ್ಯವಾಗಿ ಕೇಂದ್ರದ ಆವರಣಕ್ಕೆ ಬರುವವರ ಮೇಲೆ ನಿಗಾ ಇಡಲು ಮತ್ತು ಪರೀಕ್ಷೆ ಮುಗಿಯುವವರೆಗೆ ಮುಖ್ಯ ದ್ವಾರಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಸಿಬ್ಬಂದಿಯು ಕಡ್ಡಾಯವಾಗಿ ಇಲಾಖೆ ನೀಡಿದ ಗುರುತಿನ ಚೀಟಿಯನ್ನು ಧರಿಸಿರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿಗಳ ಕೊರತೆಯಿದ್ದಲ್ಲಿ, ಪಕ್ಕದ ಸರ್ಕಾರಿ ಪ್ರೌಢಶಾಲೆಗಳ ಕೊಠಡಿಗಳನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ವೇಳಾಪಟ್ಟಿ

ಏಪ್ರಿಲ್‌ 30 ಕನ್ನಡ ಅರೇಬಿಕ್‌, ಮೇ 2 ರಂದು ಐಚ್ಚಿಕ ಕನ್ನಡ , ತರ್ಕಶಾಸ್ತ್ರ,ಲೆಕ್ಕಶಾಸ್ತ್ರ ಮತು ರಸಾಯನ ಶಾಸ್ತ್ರ, ಮೇ 4 ರಂದು ಇಂಗ್ಲೀಷ್‌, ಮೇ 5 ರಂದು ವ್ಯವಹಾರ ಅಧ್ಯಯನ, ಭೌತಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರ, ಮೇ 6 ರಂದು ಅರ್ಥಶಾಸ್ತ್ರ ಮತ್ತು ಜೀವಶಾಸ್ತ್ರ, ಮೇ 7 ರಂದು ಇತಿಹಾಸ, ಗಣಿತ ಮತ್ತು ಗೃಹವಿಜ್ಞಾನ ಮೇ 8 ರಂದು ರಾಜ್ಯಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಮತ್ತು ಗಣಕ ಶಾಸ್ತ್ರ, ಮೇ 9 ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭಶಾಸ್ತ್ರ ಮತ್ತು ಮೂಲಗಣಿತ , ಮೇ 11 ರಂದು ಸಮಾಜ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಮೇ 12 ರಂದು ಹಿಂದಿ , ಮೇ 13 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಮತ್ತು ಫ್ರೆಂಚ್ ಈ ಎಲ್ಲ ಪರೀಕ್ಷೆಗಳು ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 1.00 ಗಂಟೆಗೆ ನಡೆಯಲಿವೆ ಮೇ 13 ರಂದು ಅಪರಾಹ್ನ 2 ರಿಂದ ಸಂಜೆ 4.15 ರವರೆಗೆ ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್‌ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೈಲ್‌ ಆಟೋಮೊಬೈಲ್‌, ಆರೋಗ್ಯ ರಕ್ಷಣೆ ಮತ್ತು ಬ್ಯೂಟಿ ಅಂಡ್‌ ವೆಲ್‌ ನೆಸ್‌ ಪರೀಕ್ಷೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್‌, ವಿವಿಧ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

[ad_2]

Source link

Leave a Reply

Your email address will not be published. Required fields are marked *