Advertisement

ದಾವಣಗೆರೆ ಸಹಿತ 20 ಜಿಲ್ಲೆಯಲ್ಲಿ ಮೇ 7ರ ವರೆಗೆ ಭಾರಿ ಮಳೆ ಮುನ್ಸೂಚನೆ » Dvgsuddi Kannada | online news portal

[ad_1]

ಬೆಂಗಳೂರು: ಬಿರು ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಒಳನಾಡಿನ ದಾವಣಗೆರೆ ಸಹಿತ 20 ಜಿಲ್ಲೆಯಲ್ಲಿ ಮೇ 7ರ ವರೆಗೆ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಈ ನಳೆವಮುಂದಿನ ಒಂದು ವಾರ ಮುಂದುವರೆಯುವ ಸಾಧ್ಯತೆ‌ ಇದೆ. ಇಂದು (ಮೇ 1) ಐದು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಹದಿನೈದು ಜಿಲ್ಲೆಗೆ ಜಿಲ್ಲೆಗಳಿಗೆ ಯೆಲೋ ಅಲರ್ಟ್‌ ಘೋಷಿಸಿದೆ.

ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ದಕ್ಷಣ ಒಳನಾಡಿನ ಮೈಸೂರು ಹಾಗೂ ಚಾಮರಾಜನಗರ ಆರೆಂಜ್ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಂಭವವಿದೆ. ಆಲಿಕಲ್ಲು ಬೀಳುವ ಸಾಧ್ಯತೆಯಿದೆ.

ಇನ್ನೂ ಕಲಬುರಗಿ, ಮಂಡ್ಯ, ಯಾದಗಿರಿ,ರಾಯಚೂರಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ‌.‌ ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗೆ ಯೆಲ್ಲೋ ಅಲರ್ಟ್’ ನೀಡಲಾಗಿದೆ.

.

[ad_2]

Source link

Leave a Reply

Your email address will not be published. Required fields are marked *