Advertisement

ದಾವಣಗೆರೆ: ಇಂದು ನೀಟ್ ಪರೀಕ್ಷೆ; ಜಿಲ್ಲಾಡಳಿತ ಅಗತ್ಯ‌ ಸಿದ್ಧತೆ » Dvgsuddi Kannada | online news portal

[ad_1]

ದಾವಣಗೆರೆರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-2026) ಮೇ 3 ರಂದು ಅಪರಾಹ್ನ 2 ರಿಂದ ಆರಂಭ ವಾಗಲಿದೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಜಿಲ್ಲಾಡಳಿತ ಕಲ್ಪಿಸಿದೆ.

ನಿಷೇಧಿತ ವಸ್ತುಗಳು

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿಯಮಗಳಂತೆ, ಕ್ಯಾಲ್ಕುಲೇಟರ್, ಸ್ಕೇಲ್, ರೈಟಿಂಗ್ ಪ್ಯಾಡ್, ಪೆನ್ ಡ್ರೈವ್‌ಗಳು, ಎರೇಸರ್, ಲಾಗ್ ಟೇಬಲ್, ಎಲೆಕ್ಟ್ರಾನಿಕ್ ಉಪಕರಣಗಳು, ಪೆನ್ ಸ್ಕ್ಯಾನರ್, ಮೊಬೈಲ್ ಫೋನ್, ಬ್ಲೂಟೂತ್, ಇಯರ್‌ಫೋನ್‌ಗಳು, ಮೈಕ್ರೋಫೋನ್, ಪೇಜರ್, ಹೆಲ್ತ್ ಬ್ಯಾಂಡ್ ಎಲ್ಲಾ ರೀತಿಯ ಎಲೆಕ್ಟ್ರಾನಿಕ್‌ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಡೆಯಿಂದ ಮೆಟಲ್ ಡಿಡೆಕ್ಟರ್ ಅಳವಡಿಸಲಾಗುತ್ತದೆ. ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಬೆಳಿಗ್ಗೆ 11.30 ರಿಂದ ಪ್ರಿಸ್ಕಿಂಗ್(ಪರಿಶೀಲನೆ) ನಡೆಸಲಾಗುವುದು. ಬಯೋಮೆಟ್ರಿಕ್ ದೃಢೀಕರಣದ ನಂತರವೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

ನಿಷೇಧಾಜ್ಞೆ ಜಾರಿ

ಪರೀಕ್ಷೆ ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಲು, ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ತಡೆಯುವ ದೃಷ್ಟಿಯಿಂದ ಪರೀಕ್ಷೆ ನಡೆಯುವ ದಿನ, ಪರೀಕ್ಷೆ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಜೆರಾಕ್ಸ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳು ನಿಷೇಧಾಜ್ಞೆ ಸಮಯದಲ್ಲಿ ಕಾರ್ಯನಿರ್ವಹಿಸುವಂತಿಲ್ಲ.

ಸಾರಿಗೆ ವ್ಯವಸ್ಥೆ : ಪರೀಕ್ಷಾ ಕೇಂದ್ರಗಳಿಗೆ ನಗರದ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ವಿಶೇಷ ನಗರ ಸಾರಿಗೆ ಬಸ್‌ ಗಳ ವ್ಯವಸ್ಥೆ ಮಾಡಲಾಗಿದೆ, ಸದರಿ ಬಸ್‌ ಗಳು ಬೆಳಿಗ್ಗೆ 9.00 ಗಂಟೆಯಿಂದ ಸಂಚರಿಸಲಿವೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳು

ದಾವಣಗೆರೆ ವಿಶ್ವವಿದ್ಯಾಲಯ,ಶಿವಗಂಗೋತ್ರಿ, ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು, ಪಿ.ಜೆ ಬಡಾವಣೆ, ಪಿ.ಬಿ ರಸ್ತೆ, ಡಿಆರ್‌ಎಂ ಸರ್ಕಾರಿ ಪದವಿ ಪೂರ್ವ ಕಾಲೇಜು, ಜಿಲ್ಲಾ ಕ್ರೀಡಾಂಗಣ ಹತ್ತಿರ , ಹದಡಿ ರಸ್ತೆ, ಎಸ್.ಎಲ್.‌ ಪದವಿ ಪೂರ್ವ ಕಾಲೇಜು, ಎಸ್.ಎನ್.‌ ಲೇಔಟ್‌, ಬಕ್ಕೇಶ್ವರ ಕಲ್ಯಾಣ ಮಂಟಪ ಹತ್ತಿರ, ಎಸ್.ಎ.ಜಿ.ಬಿ ಪಿ.ಯು ಕಾಲೇಜು, 2ನೇ ಮುಖ್ಯ, 2 ನೇ ಕ್ರಾಸ್‌, ಪಿ.ಜೆ. ಬಡಾವಣೆ, ಪಿ.ಎಂ, ಶ್ರೀ ಕೇಂದ್ರಿಯ ವಿದ್ಯಾಲಯ, ಕೊಂಡಜ್ಜಿ ರಸ್ತೆ, ಅವರಗೊಳ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, , ಜೀವ ಆರ್ಯುವೇದಿಕ ಆಸ್ಪತ್ರೆ ಹತ್ತಿರ, ಆಂಜನೇಯ ಬಡಾವಣೆ, .ಬಿಡಿಟಿ ಇಂಜಿನಿಯರಿಂಗ್‌ ಕಾಲೇಜು, ಹದಡಿ ರಸ್ತೆ, ಮೋತಿವೀರಪ್ಪ ಸರ್ಕಾರಿ ಪಿ.ಯು ಕಾಲೇಜು , ಪಿ.ಜೆ ಬಡಾವಣೆ, ಗುಂಡಿ ಸರ್ಕಲ್‌ ಹತ್ತಿರ, ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜು , ಬಾಪೂಜಿ ಡೆಂಟಲ್‌ ಕಾಲೇಜು ಹಿಂಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಡೆಂಟಲ್‌ ಕಾಲೇಜು ರಸ್ತೆ, ಎಂ.ಸಿ.ಸಿ ಬಿ ಬ್ಲಾಕ್‌, ಅನುಭವ ಮಂಟಪ ಶಾಲೆ ಹಿಂಭಾಗ, ಎ.ವಿ ಕಮಲಮ್ಮ ಪಿ.ಯು. ಮಹಿಳಾ ಕಾಲೇಜು, ಅಕ್ಕಮಹಾದೇವಿ ರಸ್ತೆ, ರಾಜನಹಳ್ಳಿ ಸೀತಮ್ಮ ಸರ್ಕಾರಿ ಪಿ.ಯು ಮಹಿಳಾ ಕಾಲೇಜು,. ಪಿ.ಜೆ ಬಡಾವಣೆ, ಮತ್ತು ಹರಿಹರ ಡಿಆರ್‌ಎಂ ಸರ್ಕಾರಿ ಪದವಿ ಪೂರ್ವ ಕಾಲೇಜು,ಹರಿಹರ.

200 ಮೀಟರ್ ನಿಷೇಧಿತ ಪ್ರದೇಶ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG 2026) ಸುಗಮವಾಗಿ ನಡೆಯಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ, ದಾವಣಗೆರೆ ಜಿಲ್ಲೆಯ ಒಟ್ಟು 14 ಪರೀಕ್ಷೆ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಮತ್ತು ಪರೀಕ್ಷಾ ಕೇಂದ್ರಗಳ ಸಮೀಪವಿರುವ ಎಲ್ಲಾ ಜೆರಾಕ್ಸ್ ಅಂಗಡಿಗಳು ಹಾಗೂ ಸೈಬರ್ ಕೆಫೆಗಳನ್ನು ಪರೀಕ್ಷಾ ಅವಧಿಯಲ್ಲಿ ಕಡ್ಡಾಯವಾಗಿ ಮುಚ್ಚುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಆದೇಶಿಸಿದ್ದಾರೆ.

[ad_2]

Source link

Leave a Reply

Your email address will not be published. Required fields are marked *