Advertisement

ದಾವಣಗೆರೆ: 4ನೇ ಸುತ್ತಿನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ; ಶ್ರೀನಿವಾಸ ದಾಸಕರಿಯಪ್ಪ 5,701 ಮತ ಮುನ್ನಡೆ » Dvgsuddi Kannada | online news portal

[ad_1]

ದಾವಣಗೆರೆ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಮತ ಎಣಿಕೆ ಭರದಿಂದ ಸಾಗಿದ್ದು, ಬಿಜೆಪಿ ಅಭ್ಯರ್ಥಿ ಶ್ರೀವಾಸ ದಾಸಕರಿಯಪ್ಪ ಎರಡು, ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಶ್ರೀನಿವಾಸ ದಾಸಕರಿಯಪ್ಪ ನಾಲ್ಕನೇ ಸುತ್ತಿನಲ್ಲಿ 5,701 ಮತಗಳ ಮುನ್ನಡೆ ಸಾಧಿದ್ದಾರೆ. ಕಾಂಗೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮೂರು ಸುತ್ತಿನಲ್ಲಿ ಹಿನ್ನಡೆ ಸಾಧಿಸಿದ್ದಾರೆ.

ಒಟ್ಟು 21 ಸುತ್ತಿನ ಮತ ಎಣಿಕೆಯಲ್ಲಿ 4 ಸುತ್ತು‌‌ ಪೂರ್ಣಗೊಂಡಿದೆ. ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಶ್ರೀನಿವಾಸ ದಾಸಕರಿಯಪ್ಪ 5,701 ಮತ ಅಂತರದ ಮುನ್ನಡೆ ಸಾಧಿಸಿದ್ದಾರೆ.‌ 3ನೇ ಸುತ್ತಿನ ಮತ ಎಣಿಕೆ ಶ್ರೀನಿವಾಸ ದಾಸಕರಿಯಪ್ಪ 4,683‌ ಮತ ಮುನ್ನಡೆ ಪಡೆದಿದ್ದಾರೆ. ಮೊದಲ ಸುತ್ತಿನಲ್ಲಿ 718 ಮತಗಳಿಂದ ಕಾಂಗ್ರೆಸ್ ನ‌ ಸಮರ್ಥ್ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀವಾಸ ದಾಸಕರಿಯಪ್ಪ. ಎರಡು ಮತ್ತು ಮೂರನೇ ಸುತ್ತಿನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಅಂಚೆ‌ ಮತ ಎಣಿಕೆಯಲ್ಲಿ ಸಮರ್ಥ್ 8 ಮತಗಳಿಂದ ಮುನ್ನಡೆ ಸಾಧಿಸಿದ್ದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ನಿಧನದಿಂದ ಉಪ ಚುನಾವಣೆ ನಡೆಯುತ್ತಿದೆ.

[ad_2]

Source link

Leave a Reply

Your email address will not be published. Required fields are marked *