Advertisement

ದಾವಣಗೆರೆ: ಬಿಜೆಪಿಗೆ 6ನೇ ಸುತ್ತಿನಲ್ಲಿಯೂ ಭರ್ಜರಿ ಮುನ್ನಡೆ; ಶ್ರೀನಿವಾಸ ದಾಸಕರಿಯಪ್ಪ 8,539 ಮತಗಳ ಅಂತರದ ಮುನ್ನಡೆ » Dvgsuddi Kannada | online news portal

[ad_1]

ದಾವಣಗೆರೆ: ದಾವಣಗೆರೆ ದಕ್ಷಿಣ ಉಪ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಶ್ರೀವಾಸ ದಾಸಕರಿಯಪ್ಪ 6ನೇ ಸುತ್ತಿನಲ್ಲಿಯೂ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಶ್ರೀನಿವಾಸ ದಾಸಕರಿಯಪ್ಪ 6ನೇ ಸುತ್ತಿನಲ್ಲಿ 8,539 ಮತಗಳ ಮುನ್ನಡೆ ಸಾಧಿದ್ದಾರೆ. ಕಾಂಗೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಸತತ 5 ಸುತ್ತಿನಲ್ಲಿ ಹಿನ್ನಡೆ ಸಾಧಿಸಿದ್ದಾರೆ.

ಒಟ್ಟು 21 ಸುತ್ತಿನ ಮತ ಎಣಿಕೆಯಲ್ಲಿ ಪ್ರಸ್ತುತ 6 ಸುತ್ತು‌‌ ಪೂರ್ಣಗೊಂಡಿದೆ. 6ನೇ ಸುತ್ತಿನಲ್ಲಿ ಬಿಜೆಪಿ ಶ್ರೀನಿವಾಸ ದಾಸಕರಿಯಪ್ಪ 25,728 ಮತ ಪಡೆದಿದ್ದು,ಕಾಂಗ್ರೆಸ್ ನ‌ ಸಮರ್ಥ್ 17,189 ಮತ ಪಡೆದಿದ್ದಾರೆ.ಈ ಮೂಲಕ 8,539 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.‌

ಮೊದಲ ಸುತ್ತಿನಲ್ಲಿ 718 ಮತಗಳಿಂದ ಕಾಂಗ್ರೆಸ್ ನ‌ ಸಮರ್ಥ್ ಮುನ್ನಡೆ ಸಾಧಿಸಿದ್ದಾರೆ. ಮೊಲದ ಸುತ್ತು ಬಿಟ್ಟರೆ ಬಿಜೆಪಿ ಅಭ್ಯರ್ಥಿ ಶ್ರೀವಾಸ ದಾಸಕರಿಯಪ್ಪ ಸತತ ಐದು ಸುತ್ತಿನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಪ್ರತಿ ಸುತ್ತಿನಲ್ಲಿ ಮತಗಳ ಅಂತರ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.

ಅಂಚೆ‌ ಮತ ಎಣಿಕೆಯಲ್ಲಿ ಸಮರ್ಥ್ 8 ಮತಗಳಿಂದ ಮುನ್ನಡೆ ಸಾಧಿಸಿದ್ದರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ನಿಧನದಿಂದ ಉಪ ಚುನಾವಣೆ ನಡೆಯುತ್ತಿದೆ.

[ad_2]

Source link

Leave a Reply

Your email address will not be published. Required fields are marked *