Advertisement

ಜನರಿಗಾಗಿ ಮನೆ, ಮನಸು ಯಾವಗಲೂ ತೆರೆದಿರುತ್ತೆ; ನಾನು ಸಹ ಅಜ್ಜನಂತೆ ಅಜಾತಶತ್ರು ಆಗುತ್ತೇನೆ; ಶಾಸಕ ಸಮರ್ಥ್ ಶಾಮನೂರು » Dvgsuddi Kannada | online news portal

[ad_1]

ದಾವಣಗೆರೆ: ಚುನಾವಣೆ ಎಂದು ಮೇಲೆ ಎಲ್ಲರಿಗೂ ಅವರದೇ ಪಕ್ಷ ಗೆಲ್ಲಬೇಕು ಎಂಬ ಆಸೆ‌ ಇರುತ್ತೆ. ಆದರೆ, ಫಲಿತಾಂಶ ಬಂದ ನಂತರ ಕ್ಷೇತ್ರದ ಎಲ್ಲ‌ ಜನ‌ ನಮ್ಮವರೇ. ಜನರ ಸೇವೆಗೆ ನಮ್ಮ ಮನೆ, ಮನಸು ಯಾವಗಲೂ ತೆರೆದಿರುತ್ತದೆ. ಜನರು ಯಾವುದೇ ಭಯ, ಹಿಂಜರಿಕೆಪಡದೆ‌ ನಿಮ್ಮ ಯಾವ ಕೆಲಸ ಆಗಬೇಕು ಎಂಬುದನ್ನು ಹೇಳಿದ್ರೆ ಜನ ಸೇವೆ ಮಾಡಲು ನಾನು ಸಿದ್ಧ. ಅಜ್ಜನಂತೆ ಅಜಾತಶತ್ರು ಆಗಿ‌ ಕೆಲಸ ಮಾಡುತ್ತೇನೆ ಎಂದು ದಾವಣಗೆರೆ ದಕ್ಷಿಣ ನೂತನ ಶಾಸಕ ಸಮರ್ಥ್ ಶಾಮನೂರು ಅಭಿಪ್ರಾಯಪಟ್ಟರು.

ದಾವಣಗೆರೆ: ಶ್ರೀ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

ಬೈ ಎಲೆಕ್ಷನ್​​ನಲ್ಲಿ ಗೆದ್ದು ಶಾಸಕರಾದ ಬಳಿಕ ಮೊದಲ ಬಾರಿಗೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮಗೆ ಅಭಿವೃದ್ಧಿ ಮಾಡುವ ಸಾಮರ್ಥ್ಯ ಇದೇ ಎಂಬ ಕಾರಣಕ್ಕಾಗಿಯೇ ನಮ್ಮನ್ನ ದಾವಣಗೆರೆ ದಕ್ಷಿಣ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ. ನಮ್ಮ ಮನೆಗೆ ಯಾಗಲು ಬಂದರು ಬಾಗಿಲು ತೆರೆದಿರುತ್ತದೆ. ಜೊತೆಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರ ಜನ ಸಂಪರ್ಕ ಕಚೇರಿ ಆರಂಭಿಸುತ್ತೇವೆ ಎಂದರು.

ದಾವಣಗೆರೆ: ಸೋಲಿನಿಂದ ಕಾರ್ಯಕರ್ತರು ಹತಾಷರಾಗುವ ಅಗತ್ಯವಿಲ್ಲ; ಜಿಲ್ಲೆಯಲ್ಲಿ ಬಿಜೆಪಿಯ ಗತವೈಭವ ಮರುಕಳಿಸಲಿದೆ

ದಾವಣಗೆರೆ ದಕ್ಷಿಣದಲ್ಲಿ ವಸತಿ ರಹಿತರಿಗೆ ಆಶ್ರಯ ಮನೆ ನಿರ್ಮಾಣ ಮಾಡುವುದು ಮೊದಲ ಆದ್ಯತೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆ ರೂಪಿಸಿದ್ದಾರೆ. ಇನ್ನು ಮಹಿಳಾ ಕಾಲೇಜು, ಆಸ್ಪತ್ರೆ ಬಗ್ಗೆ ಚರ್ಚಿಸಿ‌ ಕ್ರಮ‌ಕೈಗೊಳ್ಳುತ್ತೇವೆ ಎಂದರು.

ಇನ್ನು ಮದುವೆ ಬಗ್ಗೆ ಕೇಳಿದ ಪ್ರಶ್ನಿಗೆ ಪ್ರತಿಕ್ರಿಯಿಸಿ, ಸದ್ಯಕ್ಕೆ ಮದ್ವೆ ವಿಚಾರ ಇಲ್ಲ, ಜನರು ಈಗ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮದ್ವೆ ರೀತಿಯಲ್ಲಿ ಆಯ್ಕೆ ಮಾಡಿದ್ದಾರೆ. ಸದ್ಯಕ್ಕೆ ಮದುವೆ ಏನಿಲ್ಲ ಎಂದು ತಿಳಿಸಿದರು.

ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಎಸ್​​ಎಸ್​​ ಮಲ್ಲಿಕಾರ್ಜುನ 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಅದರಂತೆ ಇದೀಗ ಪುತ್ರ ಸಮರ್ಥ ಸಹ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಂದೆ ರೀತಿಯಲ್ಲೇ ಚಿಕ್ಕ ವಯಸ್ಸಿನಲ್ಲೇ ಅಂದರೆ 27ನೇ ವಯಸ್ಸಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ.

 

[ad_2]

Source link

Leave a Reply

Your email address will not be published. Required fields are marked *