Advertisement

ದಾವಣಗೆರೆ: ಪ್ರಧಾನಮಂತ್ರಿ ವಸತಿ ಯೋಜನೆಯಡಿ ಜಿಲ್ಲೆಗೆ 3,376 ಮನೆ ಮಂಜೂರು; 4 ಮದರಸಾಗಳ ಅಭಿವೃದ್ಧಿಗೆ 2 ಕೋಟಿ ಅನುದಾನ; ಜಿಲ್ಲಾಧಿಕಾರಿ » Dvgsuddi Kannada | online news portal

[ad_1]

ದಾವಣಗೆರೆ: ಪ್ರಧಾನಮಂತ್ರಿ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ 3,376 ಮನೆಗಳು ಮಂಜೂರಾಗಿವೆ. ಈ ಪೈಕಿ 2,637 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 959 ಅಲ್ಪಸಂಖ್ಯಾತ ಫಲಾನುಭವಿ ಗಳನ್ನು ಯೋಜನೆಯಡಿ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.

ದಾವಣಗೆರೆ: ಅಡಿಕೆ ದರದಲ್ಲಿ ಚೇತರಿಕೆ; ಎಷ್ಟಿದೆ ಇಂದಿನ ದರ..?; ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ- ಟ್ಯಾಂಕರ್ ನೀರಿನ ಮೊರೆ ಹೋದ ರೈತ

ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಾಲ್ಕು ಮದರಸಾಗಳ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.

ಜನರಿಗಾಗಿ ಮನೆ, ಮನಸು ಯಾವಗಲೂ ತೆರೆದಿರುತ್ತೆ; ನಾನು ಸಹ ಅಜ್ಜನಂತೆ ಅಜಾತಶತ್ರು ಆಗುತ್ತೇನೆ; ಶಾಸಕ ಸಮರ್ಥ್ ಶಾಮನೂರು

ಈ ಹಿಂದೆ ಮದರಸಾಗಳ ಅಭಿವೃದ್ಧಿಗೆ 5 ಲಕ್ಷ ಅನುದಾನ‌ ನೀಡಲಾಗುತ್ತಿತ್ತು. ಈ ವರ್ಷದಿಂದ ಅನುದಾನವಾನ್ನು 50 ಲಕ್ಷಕ್ಕೆ ಹೆಚ್ವಿಸಿಸಲಾಗಿದೆ‌. ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ತಲಾ 50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಜಿಲ್ಲಯ ಯಾವ ಮದರಸಾಗಳಿಗೆ ಅನುದಾನ..?

  • ಚನ್ನಗಿರಿಯ ಫೈಜ್‌ ಆಮ್‌ ಮದನಿಯಾ
  • ಹೊನ್ನಾಳಿ ಹುಣಸಘಟ್ಟದ ಜಾಮಿಯಾ
  • ಯೂಸೆಫ್‌ ಜಿಯಾವುಲ್ಲಾ ಉಲೂಮ್‌
  • ದಾವಣಗೆರೆ ಮಗಾನಹಳ್ಳಿಯ ಖುದಾಯಿಜುಲ್‌ ಖುಬ್ರಾ ಮತ್ತು ಮುಸ್ತಾಪ ನಗರದ ದಾರೂಲ್‌ ಉಲುಮ್‌ ರಝಾ ವುಲ್‌ ಮುಸ್ತಪಾ ಬರ್ಕತಿಯಾ ದಾರೂಲ್ ಮದರಸಾ

ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಎಎಸ್‌ಪಿ ಪರಮೇಶ್ವರ ಹೆಗಡೆ, ಮಹಾನಗರ ಪಾಲಿಕೆ ಆಯುಕ್ತೆ ಮಮತಾ ಗೌಡರ್, ಡಿಡಿಪಿಐ ಕೊಟ್ರೇಶ್‌ ಇದ್ದರು.

[ad_2]

Source link

Leave a Reply

Your email address will not be published. Required fields are marked *