Advertisement

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ವರ್ಗಾವಣೆ?…. ಹೊಸ ಕಮಿಷನರ್ ಯಾರು ಗೊತ್ತಾ?.

ಸದ್ಯ ಸ್ಥಳೀಯ ರಾಜಕೀಯ ಆರೋಪ-ಪ್ರತ್ಯಾರೋಪ ಕೇಂದ್ರ ಬಿಂದು ಆಗಿರುವ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆಯಿದೆ.

ಸದ್ಯ ಇರುವ ಕಮಿಷನರ್ ಎನ್ ಶಶಿಕುಮಾರ್ ಜಾಗಕ್ಕೆ ಮತ್ತೊಬ್ಬ ದಕ್ಷ ಅಧಿಕಾರಿ ಹೆಚ್ ಡಿ ಆನಂದ್ ಕುಮಾರ್ ನೇಮಕ ಸಾಧ್ಯತೆಯಿದೆ ಎಂಬ ವದಂತಿ ಹರಿದಾಡುತ್ತಿದೆ. ಹೆಚ್ ಡಿ ಆನಂದ್ ಕುಮಾರ್ ನೇಮಕದಲ್ಲಿ ಹುಬ್ಬಳ್ಳಿ ಧಾರವಾಡ ಸ್ಥಳೀಯ ಶಾಸಕರೊಬ್ಬರು ಬಹಳಷ್ಟು ಆಸಕ್ತಿ ವಹಿಸಿದ್ದು, ಆನಂದ್ ಕುಮಾರ್ ನೇಮಕ್ಕೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಸತಾಯ ಗಾತಾಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ..

ಹೆಚ್ ಡಿ ಆನಂದ್ ಕುಮಾರ್ ಪರಿಚಯ:

ಹೆಚ್ ಡಿ ಆನಂದ್ ಕುಮಾರ್ DIG, 2012 ರ ಬ್ಯಾಚ್.. BE ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಸದ್ಯ ರಾಜ್ಯ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೈಬರ್ ಕಮಾಂಡ್ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂಲತಃ ಕರ್ನಾಟಕದವರಾಗಿರುವ ಆನಂದ್ ಕುಮಾರ್, ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯವರು.. ಈ ಹಿಂದೆ ವಿಜಯಪುರ ಎಸ್ ಪಿ ಆಗಿ ಕೆಲಸ ಮಾಡುವ ಅನುಭವಿದೆ..

Leave a Reply

Your email address will not be published. Required fields are marked *