[ad_1]
ದಾವಣಗೆರೆ: ನಗರದ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಪಾದಚಾರಿ ಮೇಲ್ಸೇತುವೆಯ ಗ್ಯಾಂಗ್‌ವೇ ಗಿರ್ಡರ್ ಅಳವಡಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಮೂರು ದಿನ ರೈಲು ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ನಾಳೆಯಿಂದ (ಮೇ 14, 15) ಎರಡು ದಿನಹರಿಹರ–ಹೊಸಪೇಟೆ ಪ್ಯಾಸೆಂಜರ್ (56529) ರೈಲು ಹರಿಹರ, ಅಮರಾವತಿ ಕಾಲೋನಿ ಮತ್ತು ತೆಲಿಗಿ ಮಾರ್ಗವಾಗಿ ಚಲಿಸಲಿದ್ದು, ದಾವಣಗೆರೆ ಹಾಗೂ ತೊಳಹುಣಸೆ ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇರುವುದಿಲ್ಲ.
ಇಂದು ಮತ್ತು ನಾಳೆ ದಿನಾಂಕ 14ರಂದು ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್ (17310) ರೈಲನ್ನು ಕ್ರಮವಾಗಿ 100 ಮತ್ತು 40 ನಿಮಿಷ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.
14ರಂದು ಧಾರವಾಡ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (12726) ರೈಲನ್ನು 50 ನಿಮಿಷ ಹಾಗೂ ಅರಸೀಕೆರೆ–ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ (16213) ರೈಲನ್ನು 30 ನಿಮಿಷ ಕಾಲ ಮಾರ್ಗ ಮಧ್ಯೆ ತಡೆಹಿಡಿಯಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
[ad_2]
Source link

















Leave a Reply