Advertisement

ಸೊಸೆಯ ರೀಲ್ಸ್ ಮತ್ತು ಮಾರ್ಡನ್ ಲೈಫ್ ನೋಡಿ ಅತ್ತೆ- ಮಾವ ಆತ್ಮಹತ್ಯೆ!!

[ad_1]

ಸೊಸೆ ಧರಿಸುತ್ತಿದ್ದ ಮಾರ್ಡನ್ ಡ್ರೆಸ್ ಮತ್ತು ಆಕೆಯ ಮಾರ್ಡನ್ ಜೀವನಶೈಲಿಗೆ ಬೇಸತ್ತ ಅತ್ತೆ ಮಾವಂದಿರು ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ. 

ಹರಿಯಾಣದ ಪಾಣಿಪತ್ ಜಿಲ್ಲೆಯ ನಾರಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಸೊಸೆಯ ಜೀವನಶೈಲಿ, ಆಕೆ ಧರಿಸುತ್ತಿದ್ದ ಬಟ್ಟೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ (Social Media) ಆಕೆ ಮಾಡುತ್ತಿದ್ದ ರೀಲ್ಸ್‌ಗಳಿಂದ ಬೇಸತ್ತಿದ್ದ ಅತ್ತೆ – ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ರಾಜೇಶ್ (46) ಮತ್ತು ಅವರ ಪತ್ನಿ ಸುಮನ್ (44) ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಸೊಸೆ ಸ್ನೇಹಾಳ ವರ್ತನೆಯಿಂದಾಗಿ ಈ ದಂಪತಿಗಳು ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ದೆಹಲಿಯ ಆಧುನಿಕ ಕುಟುಂಬದಲ್ಲಿ ಬೆಳೆದಿದ್ದ ಸ್ನೇಹಾ, ಮದುವೆಯ ನಂತರ ಹಳ್ಳಿಯ ಜೀವನಕ್ಕೆ ಹೊಂದಿಕೊಳ್ಳಲು ನಿರಾಕರಿಸುತ್ತಿದ್ದರು ಎನ್ನಲಾಗಿದೆ. 

ಸ್ನೇಹ ಧರಿಸುತ್ತಿದ್ದ ಮಾಡರ್ನ್ ಬಟ್ಟೆಗಳು ಮತ್ತು ಸದಾ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿದ್ದ ಅಭ್ಯಾಸಕ್ಕೆ ಅತ್ತೆ-ಮಾವ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಸೊಸೆ ಸಾಂಪ್ರದಾಯಿಕ ಉಡುಗೆಯಾದ ಸೀರೆ ಅಥವಾ ಚೂಡಿದಾರ್ ಧರಿಸಬೇಕು ಎಂಬುದು ಅವರ ಆಸೆಯಾಗಿತ್ತು. ಆದರೆ ಸ್ನೇಹಾ ಇದನ್ನು ವಿರೋಧಿಸುತ್ತಿದ್ದುದರಿಂದ ಮನೆಯಲ್ಲಿ ಪ್ರತಿದಿನ ಜಗಳ ನಡೆಯುತ್ತಿತ್ತು. ಜಗಳದ ವೇಳೆ ಸೊಸೆ ಸ್ನೇಹಾ ತನ್ನ ಅತ್ತೆ ಸುಮನ್ ಮೇಲೆ ಹಲ್ಲೆ ಮಾಡುತ್ತಿದ್ದಳು ಮತ್ತು ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದ್ದಳು ಎಂದು ಸಂಬಂಧಿಕರು ಆರೋಪಿಸಿದ್ದಾರೆ. 

banner

ಅಲ್ಲದೆ ದಂಪತಿಗಳ ಏಕೈಕ ಪುತ್ರ ಆಶಿಶ್ ಪೋಷಕರ ಪರವಾಗಿ ನಿಲ್ಲುವ ಬದಲು ತನ್ನ ಪತ್ನಿಯನ್ನೇ ಬೆಂಬಲಿಸುತ್ತಿದ್ದ. ಇದು ರಾಜೇಶ್ ಮತ್ತು ಸುಮನ್ ದಂಪತಿಯನ್ನು ತೀವ್ರವಾಗಿ ಕುಗ್ಗಿಸಿತ್ತು. ಶನಿವಾರ ಮಧ್ಯಾಹ್ನ ಮನೆಯಲ್ಲಿ ಭಾರಿ ಜಗಳ ನಡೆದಿದ್ದು, ಇದರಿಂದ ಮನನೊಂದ ದಂಪತಿಗಳು ಸಲ್ಫಾಸ್ ವಿಷ ಸೇವಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸುಮನ್ ಸಾವನ್ನಪ್ಪಿದ್ದರೆ, ರಾಜೇಶ್ ಅವರು ಭಾನುವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಜೇಶ್ ಅವರ ಸಹೋದರ ರಮೇಶ್ ನೀಡಿದ ದೂರಿನ ಮೇರೆಗೆ, ಸೊಸೆ ಸ್ನೇಹಾ ಮತ್ತು ಆಕೆಯ ಪೋಷಕರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.



[ad_2]

Source link

Leave a Reply

Your email address will not be published. Required fields are marked *