Advertisement

ದಾವಣಗೆರೆ: ಅಡಿಕೆ ದರ ತೀವ್ರ ಕುಸಿತ;‌ ಒಂದೆಡೆ ಅಂತರ್ಜಲ ಕುಸಿತ, ಮತ್ತೊಂದೆಡೆ ದರ ಇಳಿಕೆ ಸಂಕಷ್ಟ » Dvgsuddi Kannada | online news portal

[ad_1]

ದಾವಣಗೆರೆ: ಜಿಲ್ಲೆಯ ರೈತರ ಮುಖ್ಯ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ಏಕಾಏಕಿ ತೀವ್ರ ಕುಸಿತ ಕಂಡಿದೆ. ರೈತರಿಗೆ ಒಂದೆಡೆ ಅಂತರ್ಜಲ ಕುಸಿತ, ಮತ್ತೊಂದೆಡೆ ದರ ಇಳಿಕೆ ಸಂಕಷ್ಟ ಎದುರಾಗಿದೆ.

ದಾವಣಗೆರೆ: ಭದ್ರಾ ಕಾಲುವೆಯ ಕೊನೆಯ ಹಂತದ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳ ಭೇಟಿ: ರೈತರ ಅಹವಾಲು ಸ್ವೀಕಾರ

ಕಳೆದ ಒಂದು ತಿಂಗಳಿಂದ‌ ಸತತ ಕುಸಿತ ಕಾಣುತ್ತಲೇ ಬರುತ್ತಿದೆ.‌ ಇಂದಿನ (ಮೇ 13) ಉತ್ತಮ ರಾಶಿ ಅಡಿಕೆ ದರ ಕ್ವಿಂಟಲ್ ಗೆ 54 ಸಾವಿರಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಬೇಸಿಗೆ ಬಿರು ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಬೋರ್ ವೆಲ್ ಗಳನಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ರೈತರು ಅಡಿಕೆ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದು, ರೈತರು ಭದ್ರಾ ನಾಲೆಯಿಂದ ಟ್ಯಾಂಕರ್ ನೀರಿನ ಮೂಲಕ ತೋಟ ಉಳಿಸಿಕೊಳ್ಳಲು ರೈತರು ಹೋರಾಟ ನಡೆಸುತ್ತಿದ್ದಾರೆ.

ಮೇ 13 ಚನ್ನಗಿರಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)

  • ಗರಿಷ್ಠ ಬೆಲೆ 54,299ರೂ.
  • ಕನಿಷ್ಠ ಬೆಲೆ 40,799 ರೂ.
  • ಸರಾಸರಿ ಬೆಲೆ 52,547 ರೂ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ‌ ಮೇ 13ರಂದು ಉತ್ತಮ ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 54,299 ರೂ ರೂ. ಇದ್ದು, ಕನಿಷ್ಠ ಬೆಲೆ 40,799 ರೂ., ಸರಾಸರಿ ಬೆಲೆ 52,547 ರೂ.‌ಇದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ರೈತರು, ವ್ಯಾಪಾರಿಗಳು ರಾಶಿ ಅಡಿಕೆ ಸಂಗ್ರಹ ಮಾಡಿಕೊಂಡಿದ್ದು, ದರ ಏರಿಕೆಗೆ ಕಾಯುತ್ತಿದ್ದಾರೆ.

ನಾಲ್ಕು ವರ್ಷಗಳ ಗರಿಷ್ಠ ದರ ಪಟ್ಟಿ

  • 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ
  • 2024 ಮೇ ತಿಂಗಳಲ್ಲಿ ಗರಿಷ್ಠ ದರ 55 ಸಾವಿರ
  • 2025 ಅಕ್ಟೋಬರ್ ‌ನಲ್ಲಿ ಗರಿಷ್ಠ ದರ 68,349 ರೂ.
  • 2026 ಜನವರಿ ಗರಿಷ್ಠ ದರ‌ ರೂ.59,299

2026 ಜನವರಿ ಕ್ವಿಂಟಲ್ ಅಡಿಕೆ ದರ 59,299 ರೂ. ಇತ್ತು. ಫೆಬ್ರವರಿ 56,119,ರೂ.ಗೆ ಏಕಾಏಕಿ‌ ಕುಸಿತ ಕಂಡಿದ್ದು, ಮಾರ್ಚ್ 55,500 ರೂ.ಗೆ ಮತ್ತಷ್ಟು‌ ಇಳಿಕೆ ಕಂಡಿತ್ತು. ಈಗ ಏಪ್ರಿಲ್ ನಲ್ಲಿ 55,799 ರೂ. ಇತ್ತು. ಈಗ ಮೇ ಮೊದಲ ವಾರ 56 ಸಾವಿರವಿದ್ದ ದರ, ಇವತ್ತು (ಮೇ 13) 54 ಸಾವಿರಕ್ಕೆ ಇಳಿದಿದೆ.

 

[ad_2]

Source link

Leave a Reply

Your email address will not be published. Required fields are marked *