Advertisement

ಹರಿಹರ; ನಾಲ್ಕು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ » Dvgsuddi Kannada | online news portal

[ad_1]

ದಾವಣಗೆರೆ: ಹರಿಹರ ನಗರಸಭೆಯ ವ್ಯಾಪ್ತಿಯಲ್ಲಿ ಕೆಯುಐಡಿಎಫ್‌ಸಿ (KUIDFC)-ಕೆಐಯುಡಬ್ಲ್ಯುಎಂಐಪಿ (KIUWMIP) ಯೋಜನೆಯಡಿ ಕೈಗೊಂಡಿರುವ 24/7 ನಿರಂತರ ಕುಡಿಯುವ ನೀರಿನ ಸರಬರಾಜು ಕಾರ್ಯದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ನಾಲ್ಕು ದಿನ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ.

ದಾವಣಗೆರೆ: ಅಡಿಕೆ ದರದಲ್ಲಿ ತೀವ್ರ ಕುಸಿತ;‌ ಒಂದೆಡೆ ಅಂತರ್ಜಲ ಕುಸಿತ, ಮತ್ತೊಂದೆಡೆ ದರ ಇಳಿಕೆ ಸಂಕಷ್ಟ

ಕವಲತ್ತು ಗ್ರಾಮದ ಹತ್ತಿರವಿರುವ ತುಂಗಭದ್ರಾ ನದಿಯ ಪಾತ್ರದಲ್ಲಿರುವ ಜಾಕ್‌ವೆಲ್‌ನ ತಳಭಾಗದಲ್ಲಿ ಮರಳು ಮಿಶ್ರಿತ ತಿಳಿಮಣ್ಣು ಹಾಗೂ ಕಸ-ಕಡ್ಡಿಗಳಂತಹ ಅವಶೇಷಗಳು ಶೇಖರಣೆಯಾಗಿದ್ದು, ಇದರಿಂದ ನೀರಿನ ಸರಬರಾಜಿನ ಸಾಮರ್ಥ್ಯಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಜಾಕ್‌ವೆಲ್‌ನ ಸಮರ್ಪಕ ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಭದ್ರಾ ಜಲಾಶಯ ನೀರು ; ಮೇ 17ರಿಂದ ಕಡಿತ

ಈ ಕಾಮಗಾರಿಯ ಕಾರಣದಿಂದಾಗಿ ಮೇ 17 ರಿಂದ 20 ರವರೆಗೆ, ಬೆಳಗ್ಗೆ 09:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ನಗರದಲ್ಲಿ ನೀರು ಸರಬರಾಜು ಇರುವುದಿಲ್ಲ. ಬದಲಾಗಿ, ರಾತ್ರಿ 10:00 ಗಂಟೆಯಿಂದ ಮರುದಿನ ಬೆಳಗ್ಗೆ 09:00 ಗಂಟೆಯವರೆಗೆ ನಗರಕ್ಕೆ 24/7 ನಿರಂತರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು.

ಪ್ರಸ್ತುತ ಬೇಸಿಗೆ ಕಾಲವಾಗಿರುವುದರಿಂದ, ಸಾರ್ವಜನಿಕರು ನೀರನ್ನು ಕುದಿಸಿ ಆರಿಸಿದ ನಂತರವೇ ಕುಡಿಯುವಂತೆ ಹಾಗೂ ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸಿ, ಅಗತ್ಯಕ್ಕೆ ತಕ್ಕಷ್ಟು ಸಂಗ್ರಹಿಸಿಟ್ಟುಕೊಳ್ಳುವಂತೆ ಹರಿಹರ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

[ad_2]

Source link

Leave a Reply

Your email address will not be published. Required fields are marked *