Advertisement

ದಾವಣಗೆರೆ: ದೇವಸ್ಥಾನ ಕಳವು ಪ್ರಕರಣದ ಆರೋಪಿಗಳ ಬಂಧನ; 1.50ಲಕ್ಷ ಮೌಲ್ಯದ ಬೆಳ್ಳಿ ಆಭರಣ ವಶ » Dvgsuddi Kannada | online news portal

[ad_1]

ದಾವಣಗೆರೆ: ಜಿಲ್ಲೆಯ ದೇವಸ್ಥಾವೊಂದರ ಕಳವು ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ‌ ಆರೋಪಿಗಳಿಂದ 1,50,000 ರೂ. ಮೌಲ್ಯದ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ.

ದಾವಣಗೆರೆ ಜಿಲ್ಲೆಯ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಹುಚ್ಚವನಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಏ.30 ರಂದು ಕಳ್ಳತನವಾಗಿತ್ತು. ಸಂಜೆಗೆ ಪೂಜೆಮಾಡಲು ಹೋದಾಗ ಬಸವೇಶ್ವರ ವಿಗ್ರಹದ ಮೇಲಿನ ಬೆಳ್ಳಿಯ ಬಸವಣ್ಣನ ಮೂರ್ತಿ ಛತ್ರ ಚಾಮರಗಳು, ಪಾದುಕೆಗಳು ಸುಮಾರು 800 ಗ್ರಾಂ ತೂಕದ ಸುಮಾರು 1,50,000/-ರೂ ಬೆಲೆಬಾಳುವ ಬೆಳ್ಳಿಯ ದೇವರ ಆಭರಣಗಳನ್ನು ಯಾರೋ ಕಳ್ಳತನಮಾಡಿಕೊಂಡು ಹೋಗಿರುವ ಬಗ್ಗೆ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್ಪಿ ಬಸವರಾಜ್.ಬಿ.ಎಸ್ ಮಾರ್ಗದರ್ಶನದಲ್ಲಿ ಮತ್ತು ಮಾಯಕೊಂಡ ವೃತ್ತ ಸಿ.ಪಿ.ಐ ರಾಘವೇಂದ್ರ ಸಾರಥ್ಯದಲ್ಲಿ ಮಾಯಕೊಂಡ ಪೊಲೀಸ್ ಠಾಣೆಯ ಪಿಎಸ್ಐ ಅಜಯ.ಎಸ್.ಬಿ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು. ಮಾಯಕೊಂಡ ವೃತ್ತ ಸಿ.ಪಿ.ಐ ರಾಘವೇಂದ್ರ ರವರು ಆರೋಪಿ ಮತ್ತು ಮಾಲು ಪತ್ತೆ ಕಾರ್ಯ ಕೈಗೊಂಡು, ಮೇಲ್ಕಂಡ ಪ್ರಕರಣದಲ್ಲಿನ ಆರೋಪಿಗಳಾದ 1) ಪ್ರವೀಣ ಆರ್ ವಿ (30) ದಾವಣಗೆರೆ, 2) ಸಂತೋಷ್ ( 40) ಬಂಧನ ಮಾಡಿದ್ದಾರೆ. ಆರೋಪಿತರಿಂದ ಒಟ್ಟು 1,50,000/-ರೂ ಬೆಲೆಬಾಳುವ ಬೆಳ್ಳಿಯ ದೇವರ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಪತ್ತೆ ಕಾರ್ಯ ತಂಡವನ್ನು ಎಸ್ಪಿ ಶೇಖರ್.ಹೆಚ್.ಟಿ, ಎಎಸ್ಪಿ ಪರಮೇಶ್ವರ ಹಗಡೆ ಪ್ರಶಂಶಿಸಿದ್ದಾರೆ.

[ad_2]

Source link

Leave a Reply

Your email address will not be published. Required fields are marked *