Advertisement

ಹುಬ್ಬಳ್ಳಿ: ಬೈಕ್ ಅಪಘಾತ ಇಬ್ಬರು ಯುವಕರ ಸಾವು

ಕೇಬಲ್ ವಾಯರ್‌ ಹರಿದು ರಸ್ತೆಯಲ್ಲಿ ಬಿದ್ದು,ಇದರ ಮೇಲೆ ಬೈಕ್ ಹರಿದ ಪರಿಣಾಮ ಚಕ್ರಕ್ಕೆ ವೈರ್ ಸಿಲುಕಿ ಬೈಕ್ ಸ್ಕಿಡ್ ಆಗಿ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿನ ಅರ್ಬನ್ ಓಯಸಿಸ್ ಮಾಲ್ ಬಳಿ ದುರ್ಘಟನೆ ನಡೆದಿದೆ. ಘಟನೆ ಫಯಾಜ್(25) ಮತ್ತು ಮೋಹಿದ್(27) ಎಂಬ ಯುವಕರು ಮೃತಪಟ್ಟಿದ್ದಾರೆ. ಮೃತರು ಹುಬ್ಬಳ್ಳಿಯ ತಾಜ್ ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ. ತಮ್ಮ ಬೈಕ್ ನಲ್ಲಿ ವಿಮಾನ ನಿಲ್ದಾಣ ಕಡೆ ಇಬ್ಬರು ಯುವಕರು ಹೊರಟ್ಟಿದ್ದರು. ರಸ್ತೆಯಲ್ಲಿ ಕೇಬಲ್ ವೈರ್ ಹರಿದು ಬಿದ್ದದನ್ನು ಗಮನಿಸಿದೆ, ಅದರ ಮೇಲೆ ಬೈಕ್ ಚಲಿಸಿದ್ದಾರೆ. ಈ ವೇಳೆ ವೈರ್ ಚಕ್ರಕ್ಕೆ ಸುತ್ತಿಕೊಂಡು, ಯಾವುದೇ ಚಲನೆ ಆಗದೆ ಬೈಕ್ ನೆಲ್ಕಚ್ಚಿದೆ. ಈ ಪರಿಣಾಮ ಜೋರಾಗಿ ಬಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Leave a Reply

Your email address will not be published. Required fields are marked *