Advertisement

ಅಪಾರ್ಟ್ಮೆಂಟ್‌ನ 12ನೇ ಮಹಡಿಯಿಂದ ಹಾರಿ ಮೆಡಿಕಲ್‌ ವಿದ್ಯಾರ್ಥಿ ಆತ್ಮಹತ್ಯೆ

[ad_1]

ಮಂಗಳೂರು ಮಾ.30: ಮೆಡಿಕಲ್‌ ವಿದ್ಯಾರ್ಥಿಯೊಬ್ಬ ಅಪಾರ್ಟ್ಮೆಂಟ್‌ ಒಂದರ 12ನೇ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ.

ಉತ್ತರ ಭಾರತ ಮೂಲದ ಸಾರ್ಥಕ್‌ ಮೌರ್ಯ (23) ಮೃತಪಟ್ಟ ಯುವಕ.

ಕೆಎಂಸಿ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಾರ್ಥಕ್‌, ಸೋಮವಾರ ಸಂಜೆ ಅತ್ತಾವರದ ಗೆಳತಿಯೊಬ್ಬಳ ಮನೆಯಿದ್ದ ಅಪಾರ್ಟ್ಮೆಂಟಿಗೆ ಬಂದಿದ್ದು, 12ನೇ ಮಹಡಿಗೆ ತೆರಳಿ ಅಲ್ಲಿಂದ ಹಾರಿದ್ದಾನೆ ಎನ್ನಲಾಗಿದೆ. ಬಿದ್ದ ರಭಸಕ್ಕೆ ಸಾರ್ಥಕ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ವರದಿಯಾಗಿದೆ.

ಸಾರ್ಥಕ್‌ ಅತ್ತಾವರದ ಪಿಜಿಯಲ್ಲಿ ವಾಸವಿದ್ದು, ಮಾರ್ಚ್‌ 31ರಿಂದ ಪರೀಕ್ಷೆ ನಡೆಯಲಿಕ್ಕಿತ್ತು. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರೇಮ ವೈಫಲ್ಯವೋ, ಪರೀಕ್ಷೆಯ ಭಯವೋ ಎನ್ನುವುದರ ತನಿಖೆ ನಡೆಸುತ್ತಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *