ಹುಬ್ಬಳ್ಳಿ : ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ ಮಹಾವೀರ ಲಿಂಬ್ ಸೆಂಟರ ಸತತ ೩೦ ವರ್ಷಗಳಿಂದ ವಿಕಲಚೇತನರಿಗೆ ಕೃತಕ ಕೈ ಕಾಲು ಜೋಡಣಾ ಕಾರ್ಯದಲ್ಲಿ ಮೌನ ಕ್ರಾಂತಿಯನ್ನು ಮಾಡುತ್ತಿದ್ದು ನಾಳೆ ಮೂರು ದಶಕಗಳ ಪೂರೈಕೆಯ ಹಿನ್ನೆಲೆಯಲ್ಲಿ “ಸ್ಥಾಪನಾ ವರ್ಷ-ಸ್ವಾಭಿಮಾನ ದಿವಸ”ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲೊಳ್ಳಲಾಗಿದೆ.
ಕಿಮ್ಸ ಪ್ರಾಂಗಣದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಿಂಬ್ ಸೆಂಟರ್ ಸಂಭ್ರಮಾಚರಣೆ ನಾಳೆ ಬೆಳಿಗ್ಗೆ ೯.೦೦ ಗಂಟೆಗೆ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆ, ಕೇಶ್ವಾಪುರದಲ್ಲಿ ಆಚರಿಸಲಿದ್ದು ಉದ್ಘಾಟನೆಗೆ ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ ಆಗಮಿಸಲಿದ್ದು, ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಸಚಿವ ಎಚ್. ಸಿ. ಮಹದೇವಪ್ರ,. ಶಾಸಕ ಪ್ರಸಾದ ಅಬ್ಬಯ್ಯ, ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ರಾಷ್ಟç ಸಂತ ಆಚಾರ್ಯ ವಿಮಲಸಾಗರ ಸುರೀಶ್ವರಜಿ ಮತ್ತು ಪದ್ಮವಿಮಲಸಾಗರಜಿ ಮಹಾರಾಜರು ಸಾನಿಧ್ಯ ವಹಿಸಲಿದ್ದು, ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಅಧ್ಯಕ್ಷತೆ ವಹಿಸಲಿದ್ದಾರೆಂದು ಸೆಂಟರ್‌ನ ಅಧ್ಯಕ್ಷ ಗೌತಮ ಗುಲೇಚಾ, ಕಾರ್ಯಕ್ರಮ ಸಮಿತಿಯ ಸುಭಾಸ ಡಂಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ: ವಿಕಲ ಚೇತನರ ಆಶಾಕಿರಣ ಮಹಾವೀರಲಿಂಬ್ ಸೆಂಟರ್‌ಗೆ ಮೂವತ್ತರ ಸಂಭ್ರಮನಾಳೆ ಸ್ವಾಭಿಮಾನ ದಿವಸ ಕಾರ್ಯಕ್ರಮ
















Leave a Reply