[ad_1]
2
ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಕಚೇರಿಯಲ್ಲಿ ಕಾರ್ಪೋರೇಟ್ ಜಿಹಾದ್ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಟಿಸಿಎಸ್ ʼ ಇಂತಹ ಕಿರುಕುಳ ಮತ್ತು ಬಲವಂತದ ಕುರಿತು ನಾವು ಶೂನ್ಯ ಸಹಿಷ್ಣುಗಳಾಗಿದ್ದೇವೆ ಎಂದು ಹೇಳಿದೆ. ಜೊತೆಗೆ ತನಿಖೆ ಮುಗಿಯುವವರೆಗೆ ಆರೋಪಿಗಳನ್ನು ಅಮಾನತು ಮಾಡಿರುವುದಾಗಿಯೂ ಹೇಳಿದೆ.


ಮುಂಬೈನಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಿಂದ ಈ ಹೇಳಿಕೆ ಬಿಡುಗಡೆ ಆಗಿದೆ. ಟಿಸಿಎಸ್‌ನ ಬಿಪಿಒ ವಿಭಾಗದಲ್ಲಿರುವ ಮಹಿಳಾ ಉದ್ಯೋಗಿಗಳಿಗೆ 2022 ರಿಂದ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು. ಸಂಬಳ ಹೆಚ್ಚಳ, ಭಡ್ರಿ ಆಮಿಷ ಒಡ್ಡಿ ನಮಾಜ್ ಮಾಡುವಂತೆ, ಮತಾಂತರಗೊಳ್ಳುವಂತೆ ಒತ್ತಾಯ ಮಾಡಲಾಗುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಒಂಭತ್ತು ಎಫ್‌ಐಆರ್‌ಗಳು ದಾಖಲಾಗಿದೆ. ತನಿಖೆಗೆ ಪೊಲೀಸರ ವಿಶೇಷ ತಂಡವನ್ನು ರಚನೆ ಮಾಡಲಾಗಿದ್ದು, ಎಚ್‌ಆರ್ ಮ್ಯಾನೇಜರ್ ಸೇರಿ ಏಳು ಜನರ ಬಂಧನವಾಗಿದೆ.
ಇದರ ನಡುವೆ ಮಹಾರಾಷ್ಟ್ರದಾದ್ಯಂತ ಇರುವ ಇತರೆ ಐಟಿ ಕಂಪನಿಗಳಲ್ಲೂ ಇಂಥಹ ಬೆಳವಣಿಗೆ ನಡೆದಿರುವ ಕುರಿತು ತನಿಖೆ ನಡೆಸುವಂತೆ ಮಹಾರಾಷ್ಟ್ರದ ಐಟಿ ಉದ್ಯೋಗಿಗಳ ಸಂಘಟನೆಯ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದು ಆಗ್ರಹ ಮಾಡಲಾಗಿದೆ.
[ad_2]
Source link

















Leave a Reply