Advertisement

ಮಗು ಬೇಕಾದರೆ ನಿನ್ನ ಹೆಂಡ್ತಿನ ನನ್ನ ಜೊತೆ ಕಳ್ಸು ಎಂದ ಟಿಸಿಎಸ್‌ ಬಾಸ್‌

[ad_1]

ನಾಸಿಕ್‌, ಎಪ್ರಿಲ್‌ 16: ನಾಸಿಕ್‌ನ ಟಿಸಿಎಸ್‌ ಶಾಖೆಯಲ್ಲಿ ನಡೆದಿರುವ ಮತಾಂತರದ ಸಂಚು ಮತ್ತು ನೈತಿಕ ಅಧಃಪತನದ ಆಘಾತಕಾರಿ ವಿಷಯಗಳು ಹೊರ ಬರುತ್ತಿದೆ. ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪಗಳು ಒಂದು ಕಡೆ ಕೇಳಿ ಬರುತ್ತಿದ್ದರೆ, ಇನ್ನೊಂದು ಕಡೆ ಟಿಸಿಎಸ್‌ನ ನಾಸಿಕ್‌ ಶಾಖೆಯ ಪುರುಷ ಸಂತ್ರಸ್ತ ಉದ್ಯೋಗಿಯೊಬ್ಬರು, ಟೀಮ್‌ ಲೀಡರ್‌ ತೌಸಿಫ್‌ ಅತ್ತರ್‌ ಮತ್ತು ಸಹೋದ್ಯೋಗಿ ಡ್ಯಾನಿಶ್‌ ಶೇಖ್‌ ನೀಡಿದ ಕಿರುಕುಳದ ಕುರಿತು ವಿವರಿಸಿದ್ದಾರೆ.

2022 ರಲ್ಲಿ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆರಂಭಗೊಂಡ ಈ ಕಿರುಕುಳ ಮಾರ್ಚ್‌ 2026 ರವರೆಗೆ ನಡೆದಿದೆ.

ಸಂತ್ರಸ್ತ ಉದ್ಯೋಗಿ ಮತ್ತು ಅವರ ಪತ್ನಿಗೆ ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಈ ಸೂಕ್ಷ್ಮ ವಿಷಯವನ್ನೇ ಗುರಿಯಾಗಿಸಿಕೊಂಡ ವ್ಯಕ್ತಿ, ವೈದ್ಯಕೀಯ ಚಿಕಿತ್ಸೆಯಿಂದ ಮಗು ಪಡೆಯಲು ಸಾಧ್ಯವಿಲ್ಲ, ಮಗು ಬೇಕಾದರೆ ನಿನ್ನ ಹೆಂಡತಿಯನ್ನು ನನ್ನ ಬಳಿಗೆ ಕಳುಹಿಸು ಎಂದು ವಿಕೃತವಾಗಿ ಹೇಳಿದ್ದಾರೆಂದು ಕಣ್ಣೀರಿಟ್ಟಿದ್ದಾರೆ.

ಈ ಉದ್ಯೋಗಿ ರುದ್ರಾಕ್ಷಿ ಮಾಲೆ ಧರಿಸುವುದನ್ನೇ ವಿವಾದ ಎಂದು ಆತ ಮಾಡಿದ್ದ. ಈದ್‌ ಸಂದರ್ಭದಲ್ಲಿ ಸಂತ್ರಸ್ತನನ್ನು ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ತಲೆಗೆ ಟೋಪಿ ಹಾಕಿ, ನಮಾಜ್‌ ಮಾಡಿಸಿ ಆ ಫೋಟೋಗಳನ್ನು ಕಂಪನಿಯ ಅಧಿಕೃತ ಗ್ರೂಪ್‌ನಲ್ಲಿ ಹಂಚಿದ್ದಾನೆ.

banner

ಹಿಂದೂ ದೇವರುಗಳನ್ನು ಅಪಹಾಸ್ಯ ಮಾಡುವುದು, ಮಾಂಸಾಹಾರ ಸೇವಿಸಲು ಒತ್ತಾಯಿಸುವುದು ಮತ್ತು ಕಲ್ಮಾ ಪಠಿಸುವಂತೆ ಪೀಡಿಸುವುದು ನಿರಂತರವಾಗಿ ನಡೆಯುತ್ತಿತ್ತು. ಸಂತ್ರಸ್ತನ ತಂದೆಗೆ ಪಾರ್ಶ್ವವಾಯು ಆದಾಗ, ನಿಮ್ಮ ತಂದೆ ಇಸ್ಲಾಂಗೆ ಮತಾಂತರಗೊಂಡರೆ ಮಾತ್ರ ಚೇತರಿಸಿಕೊಳ್ಳುತ್ತಾರೆ ಎಂದು ಆರೋಪಿ ಹೇಳಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

ಈಗಾಗಲೇ ಪೊಲೀಸರು ತೌಸಿಫ್‌ ಅತ್ತರ್‌, ಡ್ಯಾನಿಶ್‌ ಶೇಖ್‌ ಮತ್ತು ಹೆಚ್‌ ಆರ್‌ ವಿಭಾಗದ ನಿದಾ ಖಾನ್‌ ಸೇರಿ ಒಂಭತ್ತು ಮಂದಿಯನ್ನು ಬಂಧನ ಮಾಡಿದ್ದಾರೆ.



[ad_2]

Source link

Leave a Reply

Your email address will not be published. Required fields are marked *