[ad_1]
4
ಪುತ್ತೂರು: ಅಕ್ರಮ ಕಂಪೌಂಡ್ ನಿರ್ಮಾಣ ಮಾಡುವುದನ್ನು ವಿಚಾರಿಸಲು ಹೋದಾಗ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.


ನೆಟ್ಟಣಿಗೆ ಮುಡೂರು ಗ್ರಾಮದ ಈಶ್ವರಮಂಗಲ ಸರೋಳಿಮೂಲೆ ಅಬ್ದುಲ್ ರಹಿಮಾನ್ ಕೆ ಎಮ್ ದೂರು ನೀಡಿರುವ ವ್ಯಕ್ತಿ. ಪಡವನ್ನೂರು ಗ್ರಾಮದ ಸಸಿಹಿತ್ತಿಲ ಎಂಬಲ್ಲಿ ತಾನು ಖರೀದಿಸಿದ ನಿರ್ಬಂಧ ಜಾಗದಲ್ಲಿ ನಿರ್ಮಾಣ ಮಾಡಿದ ತಡೆಗೋಡೆಯ ಮೇಲೆ ಪಿ.ಮಹಮ್ಮದ್ ಎಂಬುವವರು ಕೆಲಸದಾಳುಗಳಿಂದ ಅಕ್ರಮ ಪ್ರವೇಶ ಮಾಡಿ ಕಂಪೌಂಡ್ ಗೋಡೆಯನ್ನು ಕಟ್ಟುತ್ತಿರುವುದನ್ನು ಪ್ರಶ್ನಿಸಿದಾಗ ಪಿ.ಮಹಮ್ಮದ್ ಅವರು ತನ್ನನ್ನು ನಿಂದಿಸಿ ಕಲ್ಲುಗಳನ್ನು ಬಿಸಾಡಿದಾಗ ಅದು ಅಮ್ಮನಿಗೆ ಬಿದ್ದಿತ್ತು.
ಬಳಿಕ ಆತ ಕತ್ತಿಯೊಂದನ್ನು ತಂದು ಬೀಸಿದಾಗ ಅದನ್ನು ತಡೆಯಲು ಹೋದ ತಮ್ಮ ಮಿಖ್ದಾದ್ ಮೇಲೆ ಹಲ್ಲೆ ನಡೆದಿದೆ. ಈ ಕುರಿತು ಈಶ್ವರಮಂಗಲ ಔಟ್‌ಪೋಸ್ಟ್‌ನಲ್ಲಿದ್ದ ಪೊಲೀಸರಿಗೆ ತಿಳಿಸಿ ಬರುವಷ್ಟರಲ್ಲಿ ಆರೋಪಿತ ತಪ್ಪಿಸಿಕೊಂಡು ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾನೆ ಎಂದು ಆರೋಪಿಸಿ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಾಗಿದೆ.
[ad_2]
Source link

















Leave a Reply