[ad_1]
2
ಮಂಗಳೂರು ಮೇ, 1: ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಮೊಬೈಲ್ ಫೋನನನ್ನು ಗುದದ್ವಾರದೊಳಗೆ ಬಚ್ಚಿಟ್ಟು ಜೈಲಿಗೆ ತರಲು ಹೋಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿರುವ ಕುರಿತು ವರದಿಯಾಗಿದೆ.


ಮೊಹಮ್ಮದ್ ತೋಹಿದ್ ಎಂಬ ಈ ಕೈದಿ ಕೇವಲ ಆರೋಪಿ ಮಾತ್ರವಲ್ಲ, ಎಪ್ರಿಲ್ 24 ರಂದು ಅನಾರೋಗ್ಯದ ಕಾರಣದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿಂದ ಜೈಲಿಗೆ ಮರಳುವ ಸಮಯದಲ್ಲಿ ಜೈಲಿನವರ ಕಣ್ತಪ್ಪಿಸಿ ಹೊರಗಿನವರ ಸಂಪರ್ಕ ಸಾಧಿಸಲು ತನ್ನ ಗುದದ್ವಾರದಲ್ಲಿ ಮೊಬೈಲ್ ಹಿಡಿದುಕೊಂಡಿರುವುದು ತಿಳಿದು ಬಂದಿದೆ.
ಎಪ್ರಿಲ್ 29, ಸಂಜೆ 5.15 ರ ಸುಮಾರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತೋಹಿದ್ ಜೈಲಿನ ಗೇಟ್ ಬಳಿ ಬಂದಿದ್ದು, ಕರ್ತವ್ಯದಲ್ಲಿದ್ದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ವಾಡಿಕೆಯಂತೆ ಮೆಟಲ್ ಡಿಟೆಕ್ಟರ್ ಹಿಡಿದು ತಪಾಸಣೆ ನಡೆಸುತ್ತಿದ್ದರು. ಆಗ ಡಿಟೆಕ್ಟರ್ ಯಂತ್ರ ಗುದದ್ವಾರದ ಬಳಿ ಹೋಗುತ್ತಿದ್ದಂತೆ ಬೀಪ್ ಸೌಂಡ್ ಜೋರಾಗಿ ಆಗಿದೆ. ತೋಹಿದ್‌ಗೆ ದಬಾಯಿಸಿ ವಿಚಾರಿಸಿದಾಗ, ಬೆದರಿ ಸತ್ಯ ಬಾಯ್ಬಿಟ್ಟಿದ್ದಾರೆ. ಸಾರ್ ಒಳಗಡೆ ಮೊಬೈಲ್ ಇದೆ ಎಂದು ಆತ ಒಪ್ಪಿಕೊಂಡಿದ್ದು, ಅಧಿಕಾರಿಗಳು ದಂಗಾಗಿದ್ದಾರೆ.
ಜೈಲು ಅಧಿಕಾರಿಗಳು ಕೂಡಲೇ ಆತನನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಹರಸಾಹಸಪಟ್ಟು ಆತನ ದೇಹದೊಳಗಿದ್ದ ಕೀ-ಪ್ಯಾಡ್ ಮೊಬೈಲನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಬರ್ಕೆ ಪೊಲೀಸರು ಈ ʼಕಿಲಾಡಿʼ ಕೈದಿಯ ವಿರುದ್ಧ ಹೊಸ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
[ad_2]
Source link


















Leave a Reply