Advertisement

ಶಸ್ತ್ರಚಿಕಿತ್ಸೆಯ ಸಮಯದಲ್ಲಿ 22 ವರ್ಷದ ರೋಗಿಯ ಖಾಸಗಿ ಫೋಟೋಗಳು ಸೋರಿಕೆ

[ad_1]

ಉತ್ತರಪ್ರದೇಶದ ಕೌಶಂಬಿಯ ಸರಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಂತ ಗಂಭೀರ ಮತ್ತು ಆಕ್ಷೇಪಾರ್ಹ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ 22 ವರ್ಷದ ಯುವತಿಯ ಮುಖ ಮತ್ತು ಖಾಸಗಿ ಅಂಗಗಳ ಫೋಟೋಗಳನ್ನು ತೆಗೆದು ವಾಟ್ಸಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದೆ.

ಎಪ್ರಿಲ್‌ 26 ರಂದು ಯುವತಿಯೊಬ್ಬಳು ಬಾರ್ಥೋಲಿನ್‌ ಸಿಸ್ಟ್‌ ಎನ್ನುವ ಶಸ್ತ್ರಚಿಕಿತ್ಸೆಗೆಂದು ಸ್ತ್ರೀರೋಗ ವಿಭಾಗಕ್ಕೆ ದಾಖಲಾಗಿದ್ದರು. ಹಿರಿಯ ವೈದ್ಯರೊಬ್ಬರ ಮೇಲ್ವಿಚಾರಣೆಯಲ್ಲಿ ಈ ಚಿಕಿತ್ಸೆ ನಡೆಯುತ್ತಿದ್ದು, ಸಿಬ್ಬಂದಿಯೊಬ್ಬರು ರೋಗಿಯ ಅರೆನಗ್ನ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ಚಿತ್ರಗಳನ್ನು ವೈದ್ಯರು, ಅಧಿಕಾರಿಗಳು, ಮಾಧ್ಯಮದವರು ಇರುವ ವಾಟ್ಸಪ್‌ ಗ್ರೂಪ್‌ಗಳಿಗೆ ರವಾನಿಸಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.

ರಾಜ್ಯ ಮಹಿಳಾ ಆಯೋಗದ ಸದಸ್ಯೆ ಪ್ರತಿಭಾ ಕುಶ್ವಾಹ ಅವರು ಈ ಕುರಿತು ದೂರು ನೀಡಿದ ಬೆನ್ನಲ್ಲೇ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸತ್ಯನಾರಾಯಣ ಪ್ರಜಾಪತ್‌ ಅವರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.

ರೋಗಿಯ ಗೌಪ್ಯತೆಯನ್ನು ಈ ರೀತಿ ಉಲ್ಲಂಘಟನೆ ಮಾಡಿರುವುದು ಆತಂಕಕಾರಿ ವಿಷಯ. ಇಂತಹ ಫೋಟೋಗಳನ್ನು ತೆಗೆಯುವುದಾಗಲಿ ಅಥವಾ ಹಂಚಿಕೊಳ್ಳುವುದಾಗಲಿ ಮಾಡಬಾರದಿತ್ತು ಎಂದು ಪ್ರತಿಭಾ ಕುಶ್ವಾಹ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *