[ad_1]
2
ಮುಂಬೈ, ಮೇ 2: ಮುಂಬೈನ್ ಗಂಡ, ಹೆಂಡತಿ, ಇಬ್ಬರು ಮಕ್ಕಳು ರಾತ್ರಿ ಕಲ್ಲಂಗಡಿ ತಿಂದ ನಂತರ ಸಾವಿಗೀಡಾದ ಘಟನೆ ನಂತರ ಎಲ್ಲರಲ್ಲೂ ಮೂಡಿದ ಒಂದು ಸಾಮಾನ್ಯ ಪ್ರಶ್ನೆ, ಹಣ್ಣು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೇ ಎಂದು.


ಮುಂಬೈನ ಪೆಂಡಿ ಬಜಾರ್ ಪ್ರದೇಶದ ಅಬ್ದುಲ್ಲಾ ಟೊಕಾಡಿಯಾ (44), ಪತ್ನಿ ನಸ್ರೀನ್ (35), ಆಯೇಷಾ (16), ಜೈನಾಬ್ (12) ರಾತ್ರಿ ಬಿರಿಯಾನಿ ತಿಂದು ನಂತರ ಕಲ್ಲಂಗಡಿ ಹಣ್ಣು ತಿಂದು ಮಲಗಿದವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕಿಸಲು ಆಗಿಲ್ಲ
ಇದಾದ ನಂತರ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ ಮೃತರ ಮನೆಯಿಂದ ಸಂಗ್ರಹ ಮಾಡಿದ ಕಲ್ಲಂಗಡಿ, ಬಿರಿಯಾನಿ, ನೀರು ಮತ್ತು ಮಸಾಲೆಗಳ ಮಾದರಿಗಳ ಮೇಲೆ ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ಕಲಬೆರಕೆಯ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.
ಇದೀಗ ತನಿಖೆ ಮಾಡುತ್ತಿರುವ ಅಧಿಕಾರಿಗಳಿಗೆ ಹೊಸ ಮಾಹಿತಿ ದೊರಕಿದ್ದು, ರಾತ್ರಿ 1 ಗಂಟೆ ಸುಮಾರಿಗೆ ಕಲ್ಲಂಗಡಿ ತಿಂದ ನಂತರ ಕುಟುಂಬವು ಅಸ್ವಸ್ಥಗೊಂಡಿರುವಂತೆ ತೋರಿದ್ದು, ಇದು ಸಿಹಿ ಅಥವಾ ಬಣ್ಣಕ್ಕಾಗಿ ಹಣ್ಣಿನಲ್ಲಿ ರಾಸಾಯನಿಕಗಳನ್ನು ಬೆರೆಸಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಆದರೆ ಹಣ್ಣಿನಲ್ಲಿ ಸಿಹಿ ಹೆಚ್ಚಿಸಲು ಕೃತಕ ಬಣ್ಣ ಅಥವಾ ರಾಸಾಯನಿಕ ಸೇರಿಸಿಲ್ಲ ಎನ್ನುವುದು ದೃಢಪಟ್ಟಿದೆ. ಅಲ್ಲದೆ ಶವ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.
ಮೃತರ ಮೆದುಳು, ಹೃದಯ ಮತ್ತು ಕರುಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದೆ. ವೈದ್ಯಕೀಯ ತಜ್ಞರ ಪ್ರಕಾರ, ಇದು ಸಾಮಾನ್ಯ ಫುಡ್ ಪಾಯಿಸನಿಂಗ್ ಅಲ್ಲ ಎನ್ನುವುದು. ಮೃತ ಅಬ್ದುಲ್ಲಾ ಅವರ ದೇಹದಲ್ಲಿ ʼಮಾರ್ಫಿನ್ʼ ಎನ್ನುವ ಮಾದಕ ವಸ್ತುವಿನ ಅಂಶ ಕಂಡು ಬಂದಿದೆ ಎಂದು ವರದಿಗಳು ತಿಳಿಸಿದೆ. ಇದು ಈ ಪ್ರಕರಣದ ದಿಕ್ಕನ್ನೇ ಬದಲಾಯಿಸಿದೆ. ಹಾಗಾಗಿ ಇದು ಆತ್ಮಹತ್ಯೆಯೋ, ಪ್ಲಾನ್ ಮಾಡಿ ಮಾಡಲಾದ ಕೊಲೆಯೋ ಅಥವಾ ಅನಿರೀಕ್ಷಿತವಾಗಿ ನಡೆದ ಘಟನೆಯೋ ಎನ್ನುವುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆ ಮನೆಯಲ್ಲಿ ಬೇಯಿಸಿದ ಮಾಂಸದ ಮಾದರಿಗಳನ್ನು ಪ್ರೋಟೀನ್ ಪರೀಕ್ಷೆಗೆ ಕಳುಹಿಸಲಾಗಿದೆ. ಆಹಾರದಲ್ಲಿ ಬ್ಯಾಕ್ಟೀರಿಯಾ ಸೋಂಕುಗಳು, ಪತ್ತೆಯಾಗದ ವಿಷಕಾರಿ ಅಂಶಗಳು ಇದೆಯೇ ಎನ್ನುವುದರ ವಿವರಕ್ಕೆ ಅಧಿಕಾರಿಗಳು ವಿಧಿವಿಜ್ಞಾನ ವರದಿಗೆ ಕಾಯುತ್ತಿದ್ದಾರೆ.
ಪೂರ್ಣ ವರದಿ ಬಂದ ನಂತರವೇ ನಾಲ್ವರ ಜೀವ ತೆಗೆದುಕೊಂಡ ಆ ವಿಷ ಯಾವುದು ಎನ್ನುವುದು ಮುನ್ನಲೆಗೆ ಬರಲಿದೆ.
[ad_2]
Source link


















Leave a Reply