Advertisement

30 ಲಕ್ಷ ಕೊಡ್ತೀನಿ, ಬೆತ್ತಲೆ ಫೋಟೋ ಕಳಿಸು-ಮಹಿಳೆಗೆ ಜ್ಯೋತಿಷಿ ಮೆಸೇಜ್‌

[ad_1]

ರಾಮನಗರ: ವಿಶೇಷ ಪೂಜೆಗೆ ನಿನ್ನ ಬೆತ್ತಲೆ ಫೋಟೋ ಕಳುಹಿಸು, 30 ಲಕ್ಷ ರೂ. ಕೊಡ್ತೀನಿ ಎಂದು ಮಹಿಳೆಯೊಬ್ಬರಿಗೆ ಜ್ಯೋತಿಷಿ ಕಿರುಕುಳ ನೀಡಿದ ಆರೋಪ ರಾಮನಗರ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕೇಳಿ ಬಂದಿದೆ.

ಕಿರಣ್‌ ಎಂಬಾತ ಮಹಿಳೆಯೊಬ್ಬರಿಗೆ ಮನಿ ಡಬ್ಲಿಂಗ್‌ ಮಾಡುವ ಪೂಜೆಗೆ ನಿನ್ನನ್ನು ಸೆಲೆಕ್ಟ್‌ ಮಾಡಬೇಕಾದರೆ ನೀನು ಬೆತ್ತಲೆ ಫೋಟೋ ಕಳುಹಿಸು ಎಂದು ರಾತ್ರಿ ಮೆಸೇಜ್‌ ಮಾಡುತ್ತಿದ್ದ. ನಾನು ಬೆಂಗಳೂರಿನಲ್ಲಿ ವಿಶೇಷ ಪೂಜೆ ಮಾಡುತ್ತೀನಿ, ಇದಕ್ಕೆ ಮೈ ಮೇಲೆ ಮಚ್ಚೆ ಇಲ್ಲದ ಮಹಿಳೆ ನಗ್ನವಾಗಿ ಕೂರಬೇಕು. ಆ ಪೂಜೆಗೆ ನಿನ್ನನ್ನು ಸೆಲೆಕ್ಟ್‌ ಮಾಡಲು ನಿನ್ನ ಬೆತ್ತಲೆ ಫೋಟೋ ಕಳಿಸು, ಪೂಜೆ ಮುಗಿದ ನಂತರ 30 ಲಕ್ಷ ರೂ. ಹಣ ಕೊಡ್ತೀನಿ ಎಂದು ಕಿರುಕುಳ ನೀಡುತ್ತಿದ್ದ.

ಈ ರೀತಿ ಕಿರುಕುಳ ಒಂದು ವಾರದಿಂದ ಜ್ಯೋತಿಷಿ ನೀಡುತ್ತಿದ್ದು, ಮಹಿಳೆ ಎರಡು ದಿನದ ಹಿಂದೆ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಆದರೂ ಆರೋಪಿಯ ಬಂಧನವಾಗಿಲ್ಲ. ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ.



[ad_2]

Source link

Leave a Reply

Your email address will not be published. Required fields are marked *