Advertisement

ದೆಹಲಿಯ ಯುವ ನ್ಯಾಯಾಧೀಶ ಮನೆಯ ಬಾತ್‌ರೂಂ ನಲ್ಲಿ ಆತ್ಮಹತ್ಯೆ

[ad_1]

ದೆಹಲಿ, ಮೇ 03: ನ್ಯಾಯಾಧೀಶರೊಬ್ಬರು ದಕ್ಷಿಣ ದೆಹಲಿಯ ಗ್ರೀನ್‌ ಪಾರ್ಕ್‌ನಲ್ಲಿನ ತಮ್ಮ ಮನೆಯ ಸ್ನಾನಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನ್ಯಾ. ಅಮನ್‌ ಕುಮಾರ್‌ ಶರ್ಮಾ (30 ವರ್ಷ) ಮೃತ ಜಡ್ಜ್‌.

ಶರ್ಮಾ ಅವರು 2021 ರ ಜೂ.19 ರಂದು ದೆಹಲಿ ನ್ಯಾಯಾಂಗ ಸೇವೆಗೆ ಸೇರಿದ್ದರು. 2018ರಲ್ಲಿ ಪುಣೆಯ ಸಿಂಬಿಯೋಸಿಸ್‌ ಕಾನೂನು ಶಾಲೆಯಿಂದ ಕಾನೂನು ಪದವಿ ಪಡೆದಿದ್ದರು. ಮಧ್ಯಾಹ್ನ 1.45 ರ ವೇಳೆ ಅಮನ್‌ಕುಮಾರ್‌ ಶರ್ಮಾ ಅವರು ಬಾತ್‌ರೂಂ ಗೆ ಹೋಗಿದ್ದು, ಎಷ್ಟೇ ಬಾಗಿಲು ಬಡಿದರೂ ಪ್ರತಿಕ್ರಿಯೆ ಬರಲಿಲ್ಲ. ಆತಂಕಗೊಂಡ ಕುಟುಂಬದವರು ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ತುರ್ತು ಕರೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಬಾತ್‌ರೂಂ ಬಾಗಿಲು ಒಡೆದು ಒಳಗೆ ಪ್ರವೇಶ ಮಾಡಿದ್ದಾರೆ. ಆದರೆ ಪ್ರಯೋಜನವಾಗಲಿಲ್ಲ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇತ್ತ ಕಡೆ ಕುಟುಂಬದವರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಮನ್‌ ಶರ್ಮಾ ಮೊಬೈಲ್‌ ಫೋನ್‌ ಸೇರಿ ಇತರ ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.



[ad_2]

Source link

Leave a Reply

Your email address will not be published. Required fields are marked *