Advertisement

ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಅಪಹರಣ, ತಡೆಯಲು ಬಂದವನ ಭೀಕರ ಹತ್ಯೆ

[ad_1]

ರಾಯಚೂರು, ಮೇ.5: ಅಪ್ರಾಪ್ತ ಬಾಲಕಿಯೋರ್ವಳನ್ನು ಕರೆದೊಯ್ಯುತ್ತಿದ್ದ ವೇಳೆ ಯುವಕರನ್ನು ಪ್ರಶ್ನೆ ಮಾಡಿದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಯಾಪಲದಿನ್ನಿ ಗ್ರಾಮದ ಈಶಪ್ಪ (30) ಕೊಲೆಯಾದ ವ್ಯಕ್ತಿ.

ಘಟನೆ ನಡೆದ ರಾತ್ರಿ ಈಶಪ್ಪ ತಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿದ್ದು, ಈ ವೇಳೆ ಅನ್ಯ ಧರ್ಮದ ಯುವಕ ಅಸ್ಲಂ ಮತ್ತು ಆತನ ಸ್ನೇಹಿತರು ಸೇರಿ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗುವುದನ್ನು ಈಶಪ್ಪ ಗಮನಿಸಿದ್ದಾರೆ. ಅಪ್ರಾಪ್ತೆ ತನ್ನ ಸ್ನೇಹಿತ ಆಂಜನೇಯನ ತಮ್ಮನ ಮಗಳಾಗಿದ್ದರಿಂದ ಈಶಪ್ಪ ತಕ್ಷಣ ಮಾಳಿಗೆಯಿಂದ ಕೆಳಗೆ ಇಳಿದು ಬಂದು ಯುವಕರನ್ನು ಪ್ರಶ್ನೆ ಮಾಡಿದ್ದಾರೆ.

ತಮ್ಮ ಕೃತ್ಯಕ್ಕೆ ಅಡ್ಡಿಯಾದ ಈಶಪ್ಪನ ಮೇಲೆ ಆಕ್ರೋಶಗೊಂಡ ಅಸ್ಲಂ ಮತ್ತು ಆತನ ಗ್ಯಾಂಗ್‌, ಹಗ್ಗ ಅಥವಾ ವೈರ್‌ನಿಂದ ಈಶಪ್ಪನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ವರದಿಯಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ.

banner

ಅನ್ಯಕೋಮಿನ ಯುವಕರಿಂದ ಕಿಡ್ನಾಪ್‌ ಆಗಿರುವ ಬಾಲಕಿಯ ಮನೆಯ ಮುಂದೆಯೇ ಈಶಪ್ಪನ ಮೃತದೇಹವನ್ನಿಟ್ಟು ಕುಟುಂಬಸ್ಥರು ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ.

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾಪಲದಿನ್ನಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ.



[ad_2]

Source link

Leave a Reply

Your email address will not be published. Required fields are marked *